ಈ ದೇವಸ್ಥಾನದ ಕಂಬಗಳನ್ನು ಲೆಕ್ಕ ಹಾಕಲು ಹೋದರೆ ಅಪಾಯ ಗ್ಯಾರಂಟಿಯಂತೆ

ಸೋಮವಾರ, 18 ಫೆಬ್ರವರಿ 2019 (07:11 IST)
ಬೆಂಗಳೂರು : ಭಾರತದಲ್ಲಿ ಅನೇಕ ಪುರಾತನ ದೇವಸ್ಥಾನಗಳಿವೆ. ಆ ದೇವಾಲಯಗಳು ತನ್ನದೇ ಆದ ವೈಶಿಷ್ಯವನ್ನು ಹೊಂದಿದೆ. ಅಲ್ಲಿ ಇಂದಿಗೂ ಭಕ್ತರು ಆಶ್ಚರ್ಯ ಪಡುವಂತಹ  ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಅಂತಹದೊಂದು ವಿಚಿತ್ರ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ದೇಗುಲದಲ್ಲಿ ನಡೆಯುತ್ತದೆ.


ಹೌದು. ಈ ಮಹಾಲಕ್ಷ್ಮಿ ದೇವಸ್ಥಾನ ಸುಮಾರು 1800 ವರ್ಷ ಹಳೆಯದು. ವಿಷ್ಟುವಿನ ಮೇಲೆ ಕೋಪಗೊಂಡ ಮಹಾಲಕ್ಷ್ಮಿ ಇಲ್ಲಿ ಬಂದು ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ. ಚಾಲುಕ್ಯರ ರಾಜ ಕರ್ಣದೇವ ಕ್ರಿ.ಶ. 7 ನೇ ಶತಮಾನದಲ್ಲಿ ದೇವಾಲಯವನ್ನು ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡಿದ್ದಾನೆ.


ವರ್ಷದಲ್ಲಿ ಒಮ್ಮೆ ಮಾತ್ರ ಸೂರ್ಯನ ಕಿರಣ ನೇರವಾಗಿ ದೇವಿಯ ಮೇಲೆ ಬೀಳುವಂತೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ಮಹಾಲಕ್ಷ್ಮಿ ದೇಗುಲ ಕೆತ್ತನೆಯ ಕಂಬಗಳಿಂದಲೇ ಹೆಸರುವಾಸಿ. ಅನೇಕ ಸುಂದರ ಕೆತ್ತನೆಗಳ ಕಂಬಗಳ ಮೇಲೆ ನಿಂತಿರುವ ಈ ದೇವಸ್ಥಾನದಲ್ಲಿ ಎಷ್ಟು ಕಂಬಗಳಿವೆ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಹಿಂದೆ ಕೆಲವರು ಎಷ್ಟು ಕಂಬಗಳಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದರಂತೆ. ಹಾಗೆ ಪ್ರಯತ್ನಿಸಿದವರ ಜೀವನದಲ್ಲಿ ಅಹಿತಕರ ಘಟನೆಗಳು ನಡೆದಿವೆ ಎಂದು ದೇವಸ್ಥಾನದ ಆಡಳಿತ ವರ್ಗ ಹೇಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ