ಸೂರ್ಯ, ಚಂದ್ರನನ್ನು ಈ ವೇಳೆ ನೋಡಿದರೆ ಸಮಸ್ಯೆ ತಪ್ಪಿದ್ದಲ್ಲ

ಸೋಮವಾರ, 27 ಮೇ 2019 (07:15 IST)
ಬೆಂಗಳೂರು : ಜಾತಕದಲ್ಲಿ ಸೂರ್ಯ, ಚಂದ್ರ ಗ್ರಹದೋಷವಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಸೂರ್ಯ ದೋಷದಿಂದ ತಲೆ ನೋವು, ಜ್ವರ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆ, ನೌಕರಿಯಲ್ಲಿ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ. ಚಂದ್ರನ ದೋಷದಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ, ಧನ ಹಾನಿ, ಖಿನ್ನತೆ ಕಾಡುತ್ತದೆ.



ಆದ್ದರಿಂದ ಶಾಸ್ತ್ರದ ಪ್ರಕಾರ ಕೆಲವೊಂದು ಸಮಯದಲ್ಲಿ ಸೂರ್ಯ ಹಾಗೂ ಚಂದ್ರನನ್ನು ನೋಡಬಾರದು. ಇದು ಕೂಡ ದೋಷಕ್ಕೆ ಕಾರಣವಾಗುತ್ತದೆ. ಸೂರ್ಯ ಹಾಗೂ ಚಂದ್ರ ಮುಳುಗುವ ವೇಳೆ ನೋಡಬಾರದು. ಇದ್ರಿಂದ ಕಣ್ಣಿನ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಶಾಸ್ತ್ರದಲ್ಲಿ ಅಪಶಕುನವೆಂದು ಪರಿಗಣಿಸಲಾಗಿದೆ

 

ಸೂರ್ಯೋದಯ ನೋಡುವುದು ಶುಭಕರ. ಹಾಗೇ ಹುಣ್ಣಿಮೆಯಂದು ಚಂದ್ರೋದಯ ನೋಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಆ ಸಂದರ್ಭದಲ್ಲಿ ಚಂದ್ರನಿಗೆ ವಿಶೇಷ ಪೂಜೆ ಮಾಡುವುದು ಮಂಗಳಕರವೆಂದು ಭಾವಿಸಲಾಗಿದೆ.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ