ಹೊಟ್ಟೆ ನೋವು ಕಡಿಮೆ ಮಾಡಲು ಬಿಸಿ ನೀರಿನಿಂದ ಹೀಗೆ ಮಾಡಿ

ಭಾನುವಾರ, 26 ಮೇ 2019 (06:52 IST)
ಬೆಂಗಳೂರು : ಬಿಸಿ ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ  ಬಿಸಿ ನೀರು ಕುಡಿದರೆ ಅದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ. ಅದೇರೀತಿ ಹೊಟ್ಟೆನೋವಿಗೂ ಕೂಡ ಬಿಸಿನೀರು ಉತ್ತಮ ಉಪಯೋಗಕಾರಿ.




ಅತಿ ತಣ್ಣಿಗಿನ ಊಟ ಮಾಡಬಾರದು. ಬಿಸಿ ಬಿಸಿ ಊಟ ಮಾಡಿದರೆ ಜೀರ್ಣಕ್ರಿಯೆಗೂ ಉತ್ತಮ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆ ಕೂಡ ಬರುವುದಿಲ್ಲ. ಒಂದು ವೇಳೆ ಹೊಟ್ಟೆನೋವು ಬಂದಾಗ ಒಂದು ಪಾತ್ರೆ ಅಥವಾ ಬಾಟೆಲ್‌ ನಲ್ಲಿ ಬಿಸಿನೀರನ್ನು ತುಂಬಿಸಬೇಕು. ನಂತರ ಹೊಟ್ಟೆಯ ಮೇಲೆ 15ನಿಮಿಷ ಇಟ್ಟುಕೊಳ್ಳಬೇಕು.


ಈ ರೀತಿ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಆಹಾರ ಜೀರ್ಣವಾಗದಿದ್ದರೆ ಬಿಸಿ ಬಿಸಿ ನೀರು ಮಿತವಾಗಿ ಕುಡಿಯುವುದರಿಂದ ಕೂಡ ಪರಿಹಾರ ಸಿಗುತ್ತದೆ. ಊಟವಾದ ನಂತರ ಅರ್ಧ ಗಂಟೆ ಬಿಟ್ಟು ಬಿಸಿ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಬೇಕು. ಯಾಕೆಂದರೆ ಇದು ಆರೋಗ್ಯ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ