ಈ ರಾಶಿಯವರು ಈ ರತ್ನ ಧರಿಸಿದರೆ ತಲೆನೋವು, ಮೂಳೆಗಳ ಸಮಸ್ಯೆಗಳನ್ನು ಎದುರಿಸುತ್ತಾರಂತೆ

ಗುರುವಾರ, 28 ಮಾರ್ಚ್ 2019 (10:17 IST)
ಬೆಂಗಳೂರು : ಜೀವನದ ಏಳು ಬೀಳಿಗೆ ರತ್ನಗಳು ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ರತ್ನ ಧರಿಸುವ ಮೊದಲು, ಯಾರ
 
ರಾಶಿಗೆ ಹಾಗೂ ಯಾವ ನಕ್ಷತ್ರಕ್ಕೆ ಯಾವ ರತ್ನ ಸೂಕ್ತ ಎಂಬುದನ್ನು ತಿಳಿದಿರಬೇಕಾಗುತ್ತದೆ. ಒಂದೊಂದು ಸಮಸ್ಯೆಗೆ ಒಂದೊಂದು ರತ್ನ ಬಳಸಬೇಕಾಗುತ್ತದೆ.

ಸೂರ್ಯನಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಮಾಣಿಕ್ಯವನ್ನು ಬಳಸಬೇಕು. ಆದರೆ ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಎಂದೂ ಮಾಣಿಕ್ಯವನ್ನು ಧರಿಸಬಾರದು. ಮಾಣಿಕ್ಯ ತಲೆನೋವು, ಮೂಳೆಗಳ ನೋವಿನ ಮೂಲಕ ನಕಾರಾತ್ಮಕ ಪ್ರಭಾವ ಶುರು ಮಾಡುತ್ತದೆ.

 

ಮಾನಸಿಕ ಹಾಗೂ ಉಸಿರಾಟದ ಸಮಸ್ಯೆಗೆ ರತ್ನ ಬಹುಮುಖ್ಯ ಪಾತ್ರ ವಹಿಸುತ್ತದೆ. ವೃಷಭ, ಮಿಥುನ, ಕನ್ಯಾ ರಾಶಿಯವರ ಮೇಲೆ ಭಯಂಕರ ಪರಿಣಾಮ ಬೀರುವ ಸಾಧ್ಯತೆಯಿದೆ. ರತ್ನ ಮಾನಸಿಕ ಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.

 

ಪಚ್ಚೆ ಮನಸ್ಸು ಹಾಗೂ ಬುದ್ಧಿಯನ್ನು ಬಲಪಡಿಸುತ್ತದೆ. ಮೇಷ, ಕರ್ಕ, ವೃಶ್ಚಿಕ ರಾಶಿಯವರು ಇದನ್ನು ಧರಿಸಬಾರದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ