ನಿಮ್ಮ ಇಷ್ಟಾರ್ಥಗಳು ನೇರವೇರಲು ಈ ಸಮಯದಲ್ಲಿ ಶಿವನನ್ನು ಪೂಜಿಸಿ
ಗುರುವಾರ, 6 ಡಿಸೆಂಬರ್ 2018 (07:28 IST)
ಬೆಂಗಳೂರು : ಶಿವ ಭಕ್ತರ ಭಕ್ತಿಗೆ ಒಲಿದು ಅವರು ಬೇಡಿದ ಕೊರಿಕೆಗಳನ್ನು ಪೂರೈಸುತ್ತಾನೆ ಎಂದು ಹೇಳುತ್ತಾರೆ. ಆದ್ದರಿಂದ ಶಿವನ ಬಳಿ ದಿನದಲ್ಲಿ ಈ ಮೂರು ಸಮಯದಲ್ಲಿ ಏನನ್ನಾದರೂ ಕೇಳಿಕೊಂಡರೆ ಅತೀ ಶೀಗ್ರವಾಗಿ ಪೂರೈಸುತ್ತಾನೆ ಎಂದು ಪಂಡಿತರು ಹೇಳುತ್ತಾರೆ. ಆ ಮೂರು ಸಮಯಗಳು ಯಾವುದೆಂದು ತಿಳಿಯಬೇಕಾ.
ಮೊದಲನೇಯದಾಗಿ ಉದಯ ಸಂಧ್ಯಾ ಸಮಯ. ಅಂದರೆ ಸೂರ್ಯನು ಉದಯಿಸುವಾಗ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವಾಗ ಈ ಸಮಯದಲ್ಲಿ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ನೇರವೇರುತ್ತದೆ.
ಎರಡನೇಯದಾಗಿ ಮಧ್ಯಾಹ್ನದ ಸಮಯ. ಅಂದರೆ ಮಧ್ಯಾಹ್ನ 12 ಗಂಟೆ. ಈ ಸಮಯದಲ್ಲಿ ಸೂರ್ಯನು ಒಂದು ದಿಕ್ಕಿನಲ್ಲಿ ಮತ್ತೊಂದು ದಿಕ್ಕಿನತ್ತ ಸಂಚಾರ ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ಶಿವನನ್ನು ಪೂಜಿಸಿದರೆ ಉತ್ತಮ.
ಮೂರನೇಯದಾಗಿ ಸಂಜೆ ಸಂಧ್ಯಾ ಸಮಯ. ಇದು ತುಂಬಾ ಮುಖ್ಯವಾದದ್ದು. ಈ ಸಮಯ ಅಂದರೆ ಶಿವನಿಗೆ ತುಂಬಾ ವಿಶೇಷವಾದದ್ದು ಮತ್ತು ಪ್ರಿಯಕರವಾದದ್ದು, ಈ ಸಮಯದಲ್ಲಿ ಏನನ್ನಾದರೂ ಕೋರಿಕೊಂಡರೆ ಅದು ನಿಮ್ಮ ಸ್ವಂತವಾಗುತ್ತದೆ, ಸುಖ , ಸಂತೋಷ, ನೆಮ್ಮದಿ ಪ್ರಾಪ್ತಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.