ನರಹುಲಿ(ನೀರುಳಿ) ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಬುಧವಾರ, 5 ಡಿಸೆಂಬರ್ 2018 (14:28 IST)
ಬೆಂಗಳೂರು : ಹೆಚ್ಚಿನವರ ಕೈ, ಕಾಲು , ಕತ್ತು, ಮುಖದಲ್ಲಿ  ಇದ್ದಕ್ಕಿದ್ದಂತೆ ನರಹುಲಿ(ನೀರುಳಿ) ಏಳುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಇದನ್ನು ಮನೆಮದ್ದಿನಿಂದ ನಿರ್ಮೂಲನೆ ಮಾಡಬಹುದು. ಆದರೆ ಇದು ಒಂದೇ ದಿನದಲ್ಲಿ ಹೋಗಲ್ಲ. ಇದು ಕಡಿಮೆಯಾಗಲು ಒಂದು ವಾರಬೇಕು.

ವೀಳ್ಯದೆಲೆ ತೊಟ್ಟು 5 ತೆಗೆದುಕೊಂಡು ಅದಕ್ಕೆ ¼ ಟೀ ಸ್ಪೂನ್ ಸುಣ್ಣ ಹಾಕಿ ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ ಅದನ್ನು ನಿಮ್ಮ ನಿರುಳಿ ಮೇಲೆ ಹಚ್ಚಬೇಕು. ನಂತರ ½ ಗಂಟೆಬಿಟ್ಟು ಹತ್ತಿಯಿಂದ ಕ್ಲೀನ್ ಮಾಡಿ. ಇದನ್ನು 7 ದಿನ ಮಾಡಿದರೆ ನಿರುಳಿ ಉದುರಿಹೋಗುತ್ತದೆ. ಆದರೆ ಇದನ್ನು ಮುಖಕ್ಕೆ ಹಚ್ಚಬಾರದು.

 

ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ನಿರುಳಿ ಮೇಲೆ ಹಚ್ಚಿ ನಂತರ ಬೆಳ್ಳುಳ್ಳಿ 2 ಎಸಳು ತೆಗೆದುಕೊಂಡು ಚೆನ್ನಾಗಿ ಜಜ್ಜಿ ನಿರುಳಿ ಮೇಲೆ ಹಚ್ಚಿ. ಇದನ್ನು ಪ್ರತಿದಿನ 1 ವಾರದ ತನಕ ಮಾಡಿದರೆ  ನಿರುಳಿ ಉದುರಿಹೋಗುತ್ತದೆ.

 

ಹತ್ತಿಯಿಂದ ವಿನಿಗರ್ ತೆಗೆದುಕೊಂಡು ಅದನ್ನು ನಿರುಳಿ ಮೇಲೆ ಹಚ್ಚಿ ನಂತರ ½ ಗಂಟೆಬಿಟ್ಟು ಹತ್ತಿಯಿಂದ ಕ್ಲೀನ್ ಮಾಡಿ. ಇದನ್ನು ಪ್ರತಿದಿನ 1 ವಾರದ ತನಕ ಮಾಡಿದರೆ  ನಿರುಳಿ ಉದುರಿಹೋಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ