ಶತ್ರುಗಳನ್ನು ಸೋಲಿಸಬೇಕೆನ್ನುವವರು ಭಾನುವಾರ ಈ ದೇವರ ಪೂಜೆ ಮಾಡಿ
ಸೋಮವಾರ, 9 ಜುಲೈ 2018 (06:19 IST)
ಬೆಂಗಳೂರು : ನೀವು ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ನಿಮಗೊಂದಿಷ್ಟು ಮಂದಿ ಶತ್ರುಗಳು ಇದ್ದೇ ಇರುತ್ತಾರೆ. ಯಾಕೆಂದರೆ ಕೆಲವು ಒಳ್ಳೆಯ ಕೆಲಸಗಳಿಂದಲೂ ಶತ್ರುಗಳ ಪಡೆ ನಿರ್ಮಾಣವಾಗುವುದು. ಇದಕ್ಕೆ ಬೇರೆಯವರೊಂದಿಗೆ ಜಗಳವಾಡಬೇಕೆಂದಿಲ್ಲ. ಆದರೂ ನಿಮ್ಮ ಅರಿವಿಗೆ ಬಾರದಂತೆ ಶತ್ರುಗಳು ಹುಟ್ಟಿಕೊಳ್ಳುವರು.
ಆದರೆ ನಿಮ್ಮೆಲ್ಲಾ ಶತ್ರುಗಳನ್ನು ಸೋಲಿಸಬೇಕೆಂದು ನಿಮಗನಿಸಿದ್ದರೆ ಆಗ ಶಕ್ತಿ ನೀಡುವಂತಹ ಸೂರ್ಯ ದೇವರನ್ನು ಪ್ರಾರ್ಥಿಸಬೇಕು ಮತ್ತು ಆರಾಧಿಸಬೇಕು. ಸೂರ್ಯನು ಶಕ್ತಿಯ ಮೂಲ ಹಾಗೂ ಈತನನ್ನು ಆರಾಧಿಸಿದರೆ ಆಗ ಶತ್ರುಗಳ ಭೀತಿ ಇರದು. ಅದಕ್ಕಾಗಿ ಉಪವಾಸ ಮಾಡಬೇಕು. ಆದಕಾರಣ ಭಕ್ತರು ಸೂರ್ಯ ಮೂಡುವ ಮೊದಲು ಎದ್ದುಕೊಂಡು ಬ್ರಹ್ಮ ಮೂಹೂರ್ತದಲ್ಲಿ ಸ್ನಾನ ಮಾಡಬೇಕು. ಇದರ ಬಳಿಕ ಪೂಜೆ ಮಾಡುವಂತಹ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಪೂಜೆಗೆ ಬೇಕಾಗುವಂತಹದು ಅರಿವಾಣ, ಕೆಂಪು ಪುಷ್ಪಗಳು, ಕುಂಕುಮ, ಅಕ್ಕಿ, ಆ ಋತುವಿನಲ್ಲಿ ಸಿಗುವಂತಹ ಒಂದು ಹಣ್ಣು.
ಮೊದಲು ನೀವು ದೀಪ ಬೆಳಗಿಕೊಂಡ ಬಳಿಕ ದೇವರಿಗೆ ಪೂಜೆ ಮಾಡಿ. ಇದರ ಬಳಿಕ ಕಥೆ ಮತ್ತು ಆರತಿ. ಆರತಿ ಬೆಳಗಿದ ಬಳಿಕ ಸೂರ್ಯ ದೇವರಿಗೆ ಅರ್ಗ್ಯ ಅಥವಾ ನೀರು ಅರ್ಪಿಸಿ. ಈ ನೀರಿನಲ್ಲಿ ಅಕ್ಕಿ, ಕುಂಕುಮ ಮತ್ತು ಕೆಂಪು ಬಣ್ಣದ ಪುಷ್ಪಗಳು ಇರಲಿ. ಉಪವಾಸ ವ್ರತ ಮಾಡುವವರು ದಿನದಲ್ಲಿ ಒಂದು ಸಲ ಮಾತ್ರ ಊಟ ಮಾಡಬೇಕು ಮತ್ತು ಬೆಲ್ಲದಿಂದ ಮಾಡಿರುವಂತಹ ಸಿಹಿ ತಿಂಡಿ ತಿಂದರೆ ತುಂಬಾ ಒಳ್ಳೆಯದು. ಇದು ಬೆಲ್ಲದಿಂದ ಮಾಡಿರುವ ಯಾವುದೇ ವಸ್ತುವಾಗಿರಬಹುದು. ಭೋಗದ ಬಳಿಕ ಸೂರ್ಯದೇವರಿಗೆ ಮತ್ತೆ ಅರ್ಗ್ಯ ನೀಡಬೇಕು. ನೀವು ಯಾವುದೇ ವಸ್ತುವಿಗೂ ಉಪ್ಪು ಬಳಸಬೇಡಿ. ಸೂರ್ಯ ಮುಳುಗುವ ಮೊದಲು ಊಟ ಮಾಡಿ, ಒಂದು ವೇಳೆ ಸೂರ್ಯ ಮುಳುಗಿದ್ದರೆ ಆಗ ನೀವು ಮರುದಿನ ಬೆಳಗ್ಗೆ ಪೂಜೆ ಮಾಡಿಕೊಂಡು ಆಹಾರ ಸೇವಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ