ನಟ ಅಂಬರೀಶ್ ಸಾವಿನ ಮನೆಗೆ ಹೋಗುವುದಿಲ್ಲವಂತೆ. ಯಾಕೆ ಗೊತ್ತಾ?
ಶನಿವಾರ, 7 ಜುಲೈ 2018 (07:34 IST)
ಬೆಂಗಳೂರು : ಚಿತ್ರರಂಗ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಂಬರೀಶ್ ಅವರು ತಮ್ಮ ಆತ್ಮೀಯ ನಡವಳಿಕೆಯಿಂದಲೇ ಎಲ್ಲರ ಮನಗೆದ್ದವರು. ಆದರೆ ಇವರು ಯಾವತ್ತು ಸಾವಿನ ಮನೆಗೆ ಹೋಗುವುದಿಲ್ಲವಂತೆ. ಇದಕ್ಕೆ ಕಾರಣ ಕೂಡ ಅವರೇ ತಿಳಿಸಿದ್ದಾರೆ.
ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಹೊಸಹಳ್ಳಿ ಬೋರೇಗೌಡರ ನಿಧನದ ದಿನದಂದು ಅವರ ಮನೆಗೆ ಹೋಗದ ನಟ ಅಂಬರೀಶ್ ಅವರು ಗುರುವಾರ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಸಾವು ಸಂಭವಿಸಿದ ಸಂದರ್ಭದಲ್ಲೇಕೆ ಬರಲಿಲ್ಲವೆಂದು ಕೇಳಿದಾಗ ತಾವು ಸಾವಿನ ಮನೆಗೆ ಹೋಗುವುದಿಲ್ಲವೆಂದು, ಅದಕ್ಕೆ ಕಾರಣವೆನೆಂಬುದನ್ನು ಬಿಚ್ಚಿಟ್ಟಿದ್ದಾರೆ.
‘ಸಾವಿನ ಮನೆಗೆ ತಾವು ಹೋದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಅರಿಯದೇ ಅಭಿಮಾನಿಗಳು ನನ್ನನ್ನು ಕಂಡು ಸಂಭ್ರಮಾಚರಣೆ ಮಾಡುತ್ತಾರೆ. ಈ ಹಿಂದೆಯೂ ತಮಗೆ ಇಂತಹ ಅನುಭವವಾಗಿದ್ದು, ದುಃಖದಲ್ಲಿರುವ ಕುಟುಂಬದವರ ಸಮ್ಮುಖದಲ್ಲಿ ಇದು ನಡೆದರೆ ಅವಮಾನವಲ್ಲವೇ ? ಹೀಗಾಗಿ ತಾವು ಸಾವಿನ ಮನೆಗೆ ಹೋಗಲು ಹಿಂದೇಟು ಹಾಕುವುದಾಗಿ’ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ