ನವಗ್ರಹಕ್ಕೆ ಈ ರೀತಿಯಲ್ಲಿ ಪ್ರದಕ್ಷಿಣೆ ಹಾಕಿದರೆ ಗ್ರಹದೋಷ ನಿವಾರಣೆಯಾಗುವುದಂತೆ!

ಮಂಗಳವಾರ, 9 ಜನವರಿ 2018 (07:17 IST)
ಬೆಂಗಳೂರು : ಗ್ರಹಗತಿಗಳಿಂದ ಎದುರಾಗುವ ತೊಂದರೆಗಳನ್ನು ಪರಿಹರಿಸಲು ಸುಲಭವಾದ ವಿಧಾನ ನವಗ್ರಹ ಪ್ರದಕ್ಷಿಣೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ. ಇವುಗಳಿಂದ ಉತ್ಪತ್ತಿಯಾಗುವ ದೈವಿಕ ಶಕ್ತಿಯು ಮನುಷ್ಯನನ್ನು ಕಾಡಾಡುವುದು. ನಿರ್ದಿಷ್ಟವಾದ ಪದ್ಧತಿಯ ಪ್ರಕಾರ ನವಗ್ರಹ ಪ್ರದಕ್ಷಿಣೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.

 
ಬಹಳಷ್ಟು ಜನ ಪ್ರದಕ್ಷಿಣೆ ಮಾಡುವಾಗ ನವಗ್ರಹಗಳ ಮೂರ್ತಿಯನ್ನು ಮುಟ್ಟಿ ನಮಸ್ಕರಿಸುತ್ತಾರೆ. ಸಾಧ್ಯವಾದಷ್ಟು ಅವುಗಳನ್ನು ಮುಟ್ಟದೆ ನಮಸ್ಕರಿಸುವುದು ಉತ್ತಮ. ನವಗ್ರಹಗಳ ಮಧ್ಯ ಸೂರ್ಯ ಪೂರ್ವದಿಕ್ಕಿನಲ್ಲಿರುತ್ತಾನೆ. ಸೂರ್ಯನಿಗೆ ಬಲಭಾಗದಲ್ಲಿ ಕುಜನು ದಕ್ಷಿಣಾಭಿಮುಖವಾಗಿ ಇರುತ್ತಾನೆ. ಶುಕ್ರನಿಗೆ ಬಲಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಚಂದ್ರನಿದ್ದು, ಎಡಭಾಗದಲ್ಲಿ ಬುಧನು ಉತ್ತರಾಭಿಮುಖವಾಗಿ ಇರುತ್ತಾನೆ. ಸೂರ್ಯನ ಹಿಂಭಾಗದಲ್ಲಿ ಶನಿ ಮಹತ್ಮ ಪಶ್ಚಿಮಾಭಿಮುಖವಾಗಿರುತ್ತಾನೆ. ಶನಿಗೆ ಎಡಭಾಗ ರಾಹು ಉತ್ತರಾಭಿಮುಖವಾಗಿಯೂ ಒಬ್ಬರನೊಬ್ಬರು ನೋಡಿಕೊಳ್ಳುತ್ತಿರುತ್ತಾರೆ. ಇದು ಪ್ರಶಸ್ತವಾದ ಪ್ರತಿಷ್ಠಾಪನೆಯಾಗಿದೆ.



ಸೂರ್ಯನನ್ನು ನೋಡುತ್ತಾ ಒಳಪ್ರವೇಶ ಮಾಡಿ ಎಡಭಾಗದಿಂದ ಚಂದ್ರನ ಕಡೆಯಿಂದ ಬಲಭಾಗಕ್ಕೆ 9 ಪ್ರದಕ್ಷಿಣೆ ಹಾಕುವುದು ಶ್ರೇಷ್ಠ. ಪ್ರದಕ್ಷಿಣೆ ಪೂರ್ಣಗೊಂಡ ನಂತರ ಬಲಭಾಗದಿಂದ ಎಡಭಾಗಕ್ಕೆ ಅಂದರೆ ಬುಧನ ಕಡೆಯಿಂದ ರಾಹುವನ್ನು ಕೇತುವನ್ನು ಸ್ಮರಿಸುತ್ತಾ 2 ಪ್ರದಕ್ಷಿಣೆ ಮಾಡಬಹುದು. ಕೊನೆಗೆ ಸಾಲಾಗಿ ಸೂರ್ಯನನ್ನು, ಚಂದ್ರನನ್ನು, ಕುಜ, ಬುಧ, ಬ್ರಹಸ್ಮತಿ, ಶುಕ್ರ, ಶನಿ ಮಹಾತ್ಮ, ರಾಹು, ಕೇತುವನ್ನು ಸ್ಮರಿಸುತ್ತಾ ಒಂದೊಂದು ಪ್ರದಕ್ಷಿಣೆ ಮಾಡಿ ನವಗ್ರಹಗಳಿಗೆ ಬೆನ್ನು ತೋರಿಸದೆ ಬರಬೇಕು. ಗ್ರಹದೋಷಗಳಿಂದ ಹೊರಬರಲು ನವಗ್ರಹ ಪ್ರದಕ್ಷಿಣೆಗಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ