ಬೆಂಗಳೂರು : ಕೆಲವರಿಗೆ ಬಾಯಿಂದ ದುರ್ವಾಸನೆ ಬರುತ್ತಿರುತ್ತದೆ. ಅಂತವರು ಮಾತನಾಡಿದಾಗ ಅವರ ಪಕ್ಕ ಬೇರೆಯವರಿಗೆ ನಿಂತುಕೊಳ್ಳಲು ಆಗುವುದಿಲ್ಲ. ಹಾಗೆ ಅವರು ಕೂಡ ಬೇರೆಯವರ ಜೊತೆ ಮಾತನಾಡಲು ಮುಜುಗರ ಪಡುತ್ತಾರೆ. ಇದನ್ನು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ಹೋಗಲಾಡಿಸಬಹುದು.
½ ಚಮಚ ಸಾಸಿವೆ ಎಣ್ಣೆ, ಸ್ವಲ್ಪ ಕಲ್ಲುಪ್ಪು, 1 ಚಿಟಿಕೆ ಕರ್ಪೂರ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಹಾಗು ರಾತ್ರಿ ಬ್ರೆಶ್ ಮಾಡುವುದರಿಂದ ಬಾಯಿಂದ ದುರ್ವಾಸನೆ ಬರುತ್ತಿರುವುದನ್ನು ತಡೆಯಬಹುದು.
250 ಎಂಎಲ್ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಂದ ದುರ್ವಾಸನೆ ಬರುವುದಿಲ್ಲ. ಹಾಗೆ ಊಟ ಆದ ಮೇಲೆ ಒಂದು ಏಲಕ್ಕಿ ತಿನ್ನುವುದರಿಂದ ಬಾಯಿ ವಾಸನೆ ಬರುವುದಿಲ್ಲ. ಹೊರಗಡೆ ಹೋಗುವಾಗ 2-3 ಲವಂಗ ತಿನ್ನುವುದದರಿಂದ ಬೇರೆಯವರೊಡನೆ ಮಾತನಾಡುವಾಗ ಬಾಯಿಂದ ದುರ್ವಾಸನೆ ಬರಲ್ಲ. ಹಾಗೆ ಊಟ ಆದಮೇಲೆ ಸೊಂಪು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬಾಯಿಂದ ದರ್ವಾಸನೆ ಬರುವುದು ಕಡಿಮೆಯಾಗುತ್ತದೆ. ಊಟ ಆದ ಮೇಲೆ ಚೆನ್ನಾಗಿ ಬಾಯಿಯನ್ನು ಮುಕ್ಕಳಿಸಿ ತೊಳೆಯೊರಿ. ಇದರಿಂದ ಆಹಾರ ಪದಾರ್ಥಗಳು ಹಲ್ಲಲ್ಲಿ ಸೇರಿ ಕೊಳೆತು ಬಾಯಿಂದ ದುರ್ವಾಸನೆ ಬರುವುದು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ