ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೮/೭/೧೮ ಬುಧವಾರ ಷಷ್ಠೀ ತಿಥಿ ರಾತ್ರೀ ೨-೩೭ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಉತ್ತರ ಸಾಯಂ ೫/೧೦ರ ವರೆಗೆ ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಮದ್ಯಾಹ್ನ ೧೨ ರಿಂದ ೧.೩೦.ಘಂಟೆಯವರೆಗೆ
ಷಷ್ಠಿ ಉಪರಿ ಸಪ್ತಮಿ ಬಂದ ಕಾರಣ ಷಷ್ಠೀ ಮತ್ತು ಸಪ್ತಮಿ ಮಿತಿಯ ಶ್ರಾದ್ದವನ್ನು ಇವತ್ತೆ ಮಾಡತಕ್ಕದ್ದು . ಹೋಮ ಕಾರ್ಯಕ್ಕೆ ಅಗ್ನಿ ಇರುತ್ತದೆ. ದಿನ ಶುದ್ದಿ ಇರುತ್ತದೆ ಪ್ರಯಾಣ, ಮಂಗಲ ಕಾರ್ಯಕ್ಕೆ ತೊಂದರೆ ಇರುವುದಿಲ್ಲ.
ಮೇಷ ;ರಾಶಿಗೆ ಮಧ್ಯಮ ಫಲ, ಸುಗ್ರಾಸ ಭೋಜನದ ಸುದ್ದಿ ಬರಲಿದೆ
ವೃಷಭ; ರಾಶಿಗೆ ಉತ್ತಮ ಫಲ ಮಕ್ಕಳಿಂದ ಶುಭ ಸುದ್ದಿ ಸಣ್ಣ ಪ್ರವಾಸ
ಮಿಥುನ ;ಮದ್ಯಮ, ಆಗಬೇಕಾದ ಕೆಲಸ ಆಗಲಿಲ್ಲವೆಂಬ ಚಿಂತೆ ಕಾಡಬಹುದು