ಯಾವ ರಾಶಿಯವರು ಯಾವ ಪ್ರಾಣಿಯನ್ನು ಸಾಕಿದರೆ ಅದೃಷ್ಟ ಎಂಬುದು ತಿಳಿಬೇಕಾ?
ಭಾನುವಾರ, 7 ಜುಲೈ 2019 (08:25 IST)
ಬೆಂಗಳೂರು : ಸಾಮಾನ್ಯವಾಗಿ ಕೆಲವರು ಮನೆಗಳಲ್ಲಿ ನಾಯಿ ಬೆಕ್ಕುಗಳನ್ನು ಸಾಕುತ್ತಾರೆ. ಕೆಲವು ಬಾರಿ ನಾವು ಸಾಕುವ ಪ್ರಾಣಿ, ಪಕ್ಷಿಗಳು ಕೂಡ ನಮಗೆ ಶುಭವನ್ನು ತಂದೊಡ್ಡುತ್ತವೆಂದು. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಅನುಸಾರವಾಗಿ ಸರಿಯಾದ ಪ್ರಾಣಿಯನ್ನು ಪಕ್ಷಿಯನ್ನು ಸಾಕಿದರೆ ಎಲ್ಲವೂ ಶುಭವಾಗುತ್ತದೆ ಎನ್ನುತ್ತಾರೆ.
*ಮೇಷ ರಾಶಿ:ಮೇಷ ರಾಶಿಯವರು ಸ್ವತಂತ್ರ ಪ್ರಿಯರಾಗಿರುತ್ತಾರೆ, ಈರಾಶಿಯವರು ಲ್ಯಾಬ್ರಾಡಾರ್ ನಾಯಿಯನ್ನು ಸಾಕಿದರೆ ಅದು ಇವರೊಂದಿಗೆ ಹೊಂದಿಕೊಂಡು ಹೋಗುತ್ತದೆ.
*ವೃಷಭ ರಾಶಿ: ಬೆಕ್ಕುಗಳು ಈ ರಾಶಿಯವರಿಗೆ ವಿಶೇಷವಾಗಿ ಪೂರ್ಣ ರೂಪವಾಗಿ ಹೊಂದಿಕೊಳ್ಳುತ್ತವೆ. ವೃಷಭ ರಾಶಿಯವರು ಬೆಕ್ಕಿನ ಜೊತೆಗೆ ಮೊಲವನ್ನು ಸಾಕಿಕೊಳ್ಳಬಹುದು.
*ಮಿಥುನ ರಾಶಿ : ಮಿಥುನ ರಾಶಿಯವರು ಜಾಸ್ತಿ ಮಾತನಾಡಲು ಇಷ್ಟ ಪಡುತ್ತಾರೆ. ಆದ್ದರಿಂದ ಈ ರಾಶಿಯವರಿಗೆ ಸಾಕಲು ಗಿಣಿ ತುಂಬಾ ಉಪಯುಕ್ತ ಪಕ್ಷಿಯಾಗಿದೆ. ಹಾಗೇ ಈ ರಾಶಿಯವರಿಗೆ ಗಿಣಿ ಸಾಕುವುದು ತುಂಬಾ ಶುಭ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
* ಕಟಕ ರಾಶಿ : ಈ ರಾಶಿಯವರು ತುಂಬಾ ಸಂವೇದನಾಶೀಲ ಪ್ರವೃತ್ತಿ ಉಳ್ಳವರಾಗಿದ್ದು, ಈ ರಾಶಿಯವರು ಏಡಿಯನ್ನು ಸಾಕುವುದು ತುಂಬಾ ಲಾಭಕಾರಿಯಾಗಿದೆ.
* ಸಿಂಹ ರಾಶಿ : ಈ ರಾಶಿಯವರು ತುಂಬಾ ಘನತೆ, ಗೌರವವುಳ್ಳ ವ್ಯಕ್ತಿತ್ವದವರಾಗಿರುತ್ತಾರೆ. ಈ ರಾಶಿಯವರಿಗೆ ಕುದುರೆ ಒಂದು ಉತ್ತಮ ಪ್ರಾಣಿ ಎಂದು ಸಾಬೀತಾಗಿದೆ. ಕುದುರೆಯ ಜೊತೆಗೆ ಇವರಿಗೆ ಬೆಕ್ಕು ಕೂಡಾ ಸಿಂಹ ರಾಶಿಯವರಿಗೆ ಉತ್ತಮ ಸ್ನೇಹಿತ ಪ್ರಾಣಿಯಾಗಿರುತ್ತದೆ.
* ಕನ್ಯಾ ರಾಶಿ : ಈ ರಾಶಿಯವರು ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಈ ರಾಶಿಯವರಿಗೆ ಮೀನುಗಳನ್ನು ಸಾಕುವುದು ತುಂಬಾ ಫಲವನ್ನು ನೀಡುತ್ತದೆ.
* ತುಲಾ : ತುಲಾ ರಾಶಿಯವರು ಸುಂದರವಾಗಿರುವ ಮತ್ತು ಪ್ರಾಕೃತಿಕ ವಸ್ತುಗಳ ಮಧ್ಯೆ ಇರಲು ಅವರು ಇಷ್ಟಪಡುತ್ತಾರೆ. ಈ ರಾಶಿಯವರಿಗೆ ಬೆಕ್ಕುಗಳನ್ನು ಸಾಕುವುದರಿಂದ ತುಂಬಾ ಉತ್ತಮ ಫಲಗಳನ್ನು ಪಡೆಯುತ್ತಾರೆ.
* ವೃಶ್ಚಿಕ :ವೃಶ್ಚಿಕ ರಾಶಿಯವರು ತುಂಬಾ ಚಂಚಲ ಮನಸ್ಸಿನ ಸ್ವಭಾವ ಉಳ್ಳವರಾಗಿರುತ್ತಾರೆ. ಈ ರಾಶಿಯವರಿಗೆ ಬೆಕ್ಕು ಮತ್ತು ಕುದುರೆ ತುಂಬಾ ಇಷ್ಟವಾದ ಪ್ರಾಣಿಗಳಾಗಿರುತ್ತವೆ.
* ಧನು ರಾಶಿ : ಧನಸ್ಸು ರಾಶಿಯವರು ತುಂಬಾ ಸ್ವತಂತ್ರರಾಗಿರಲು ಇಷ್ಟಪಡುತ್ತಾರೆ. ಇವರಿಗೆ ಯಾವುದೇ ಪ್ರಾಣಿಯಾಗಲಿ,ಪಕ್ಷಿಯಾಗಲಿ ತಮ್ಮ ಸ್ವತಂತ್ರಕ್ಕೆ ಅಡ್ಡಿ ಪಡಿಸುವಂತಹ ಪ್ರಾಣಿ, ಪಕ್ಷಿಗಳು ಇವರಿಗೆ ಇಷ್ಟವಾಗುವುದಿಲ್ಲ. ಇವರಿಗೆ ಕಡಿಮೆ ಆರೈಕೆ ಮಾಡುವ ಪ್ರಾಣಿ ಮತ್ತು ಪಕ್ಷಿಗಳು ಜಾಸ್ತಿ ಇಷ್ಟವಾಗುತ್ತವೆ. ಧನಸ್ಸು ರಾಶಿಯವರಿಗೆ ಆಮೆ ಮತ್ತು ಮೀನುಗಳು ತುಂಬಾ ಉತ್ತಮವಾಗಿ ಹೊಂದಿಕೊಂಡು ಹೋಗುತ್ತವೆ.
* ಮಕರ ರಾಶಿ: ಈ ರಾಶಿಯವರಿಗೆ ನಾಯಿಯನ್ನು ಸಾಕುವುದರಲ್ಲಿ ತುಂಬಾ ಆಸಕ್ತಿ ಇರುತ್ತದೆ. ನಾಯಿಯನ್ನು ಸಾಕುವುದು ಇವರಿಗೆ ತುಂಬಾ ಫಲದಾಯಕ ಎಂದು ಸಾಬೀತಾಗಿದೆ.
* ಕುಂಭರಾಶಿ: ಈ ರಾಶಿಯವರು ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ. ಪಕ್ಷಿಗಳು ಅಥವಾ ನಾಯಿಗಳನ್ನು ಇವರು ಸಾಕಿಕೊಳ್ಳಬಹುದು . ಇವರಿಗೆ ಇವುಗಳನ್ನು ಸಾಕಿಕೊಳ್ಳುವುದು ಉತ್ತಮ ಎಂದು ಪರಿಗಣಿಸಲಾಗಿದೆ.
* ಮೀನರಾಶಿ:ಮೀನ ರಾಶಿಯವರು ತುಂಬಾ ಭಾವೋದ್ರಿಕ್ತ ಸ್ವಭಾವದವರಾಗಿದ್ದು, ಜೊತೆಗೆ ಸಂವೇದನಾಶೀಲತೆ ಯುಳ್ಳವರು. ಈ ರಾಶಿಯವರು ಜಾಸ್ತಿ ಇವರು ಮೀನುಗಳನ್ನು ಇಷ್ಟಪಡುತ್ತಾರೆ. ಮೊಲಗಳು ಕೂಡ ಇವರಿಗೆ ಉತ್ತಮ ಸ್ನೇಹಿತರಾಗಿ ಇರುತ್ತವೆ.