ಈ ರಸ್ತೆಯಲ್ಲಿ ನಡೆದು ಹೋಗಬೇಕೆಂದರೆ ಎಂಟೆದೆ ಬೇಕೇ ಬೇಕು

ಶನಿವಾರ, 6 ಜುಲೈ 2019 (19:37 IST)
ಈ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕೆಂದರೆ ನಿಜಕ್ಕೂ ಧೈರ್ಯ ಬೇಕು. ಅಪ್ಪಿ ತಪ್ಪಿ ನೀವು ತಪ್ಪು ಮಾಡದಿದ್ದರೂ ನಡೆದುಕೊಂಡು ಹೋದರೆ ಆಗ ನೀವು ಸೇರೋದು ಮನೆ, ಕಚೇರಿಯನ್ನಲ್ಲ ನೇರವಾಗಿ ಆಸ್ಪತ್ರೆಗೆ.

ಕಲಬುರಗಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಓಝಾ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಗಲ್ಲಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ. ಇಂದು ಈ ಪ್ರದೇಶದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಎಂಬುದನ್ನೂ ನೋಡದೇ ನಾಯಿಯೊಂದು ಕಚ್ಚಿ ಗಾಯಗೊಳಿಸಿದೆ.

ಬೀದಿ ನಾಯಿಯ ದಾಳಿಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬೀದಿ ನಾಯಿಗಳ ಹಾವಳಿಯಿಂದಾಗಿ ಬಡಾವಣೆಗಳ ಜನರು ಬೆಚ್ಚಿ ಬಿದ್ದಿದ್ದಾರೆ. ಮಕ್ಕಳನ್ನು ಹೊರಗಡೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ