ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು, ಏನನ್ನು ನೋಡಬಾರದು ಗೊತ್ತಾ…?

ಭಾನುವಾರ, 17 ಡಿಸೆಂಬರ್ 2017 (06:12 IST)
ಬೆಂಗಳೂರು: ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೆರದಿದ್ದರೆ ಬೆಳಿಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗುತ್ತಾರೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ. ಪುರಾಣಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂದು ತಿಳಿಸಲಾಗಿದೆ.


ಬೆಳಿಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಬಿಟ್ಟುಕೊಂಡ ಹೆಂಡತಿಯನ್ನು ನೋಡಬಾರದು ಹಾಗೆ ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಪ್ರಾಣಿಗಳ ಅದರಲ್ಲೂ ಕ್ರೂರ ಪ್ರಾಣಿಗಳ ಪೋಟೋವನ್ನು ನೋಡಬಾರದು ಎಂದು ಹೇಳುತ್ತಾರೆ. ಆದರೆ ಗೋವಿನ ಮುಖ ನೋಡಬಹುದು. ಏಕೆಂದರೆ ಗೋವಿನಲ್ಲಿ ಅಷ್ಟದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿ ಬೆಳಿಗ್ಗೆ ಗೋವಿನ ದರ್ಶನ ಮಾಡಿದ್ದರೆ  ಅಷ್ಟದೇವತೆಗಳ ದರ್ಶನ ಮಾಡಿದ ಪುಣ್ಯ ದೊರಕುತ್ತದೆಯಂತೆ.


ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಭೂಮಿತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸಬೇಕು. ಹಾಗೆ ತುಳಸಿ ಗಿಡಕ್ಕೂ ಕೂಡ ನಮಸ್ಕರಿಸಬಹುದು.ಇದರಿಂದ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಹಾಗೇ ಅಗ್ನಿ, ಜಲವನ್ನು ನೋಡಿದರೆ ಆ ದಿನ ಒಳ್ಳೆದಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಏಕೆಂದರೆ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ