ಊಬರ್ ಬುಕ್ ಮಾಡಿ ಆನ್‌ಲೈನ್​ ನಲ್ಲಿ ಹಣ ನೀಡುವ ಪ್ರಯಾಣಿಕರೇ ಎಚ್ಚರ

ಶುಕ್ರವಾರ, 1 ಮಾರ್ಚ್ 2019 (07:00 IST)
ಬೆಂಗಳೂರು : ಊಬರ್ ಬುಕ್ ಮಾಡಿ ಪ್ರಯಾಣ ಬೆಳೆಸಿದ ವ್ಯಕ್ತಿಯೊಬ್ಬರಿಗೆ ಊಬರ್ ಚಾಲಕ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.


ಪ್ರದೀಪ್ ಚಂದ್ರಶೇಖರನ್ ಮೋಸ ಹೋಗಿರುವ ವ್ಯಕ್ತಿ. ಇವರು ಬೇರೆ ಕಡೆ ಹೋಗಲು ಊಬರ್ ಬುಕ್ ಮಾಡಿ ಪ್ರಯಾಣ ಬೆಳೆಸಿದ್ದರು. ಬಳಿಕ ಡ್ರಾಪ್ ಮಾಡಿದ್ದ ಡ್ರೈವರ್ ಆನ್‌ಲೈನ್​ ನಲ್ಲೇ ಹಣ ಹಾಕಲು ಹೇಳಿದ್ದಕ್ಕೆ ಪ್ರದೀಪ್ ಭೀಮ್ ಆ್ಯಪ್​ನಲ್ಲಿ 698 ರೂ. ಹಣ ಹಾಕಿದ್ದರಂತೆ. ಆಗ ಪ್ರದೀಪ್​ ಮೊಬೈಲ್​ನಲ್ಲಿ ಹಣ ಕಟ್ ಆಗಿರುವುದರ ಬಗ್ಗೆಯೂ ಮಾಹಿತಿ ಬಂದಿತ್ತು. ಆದರೆ ಡ್ರೈವರ್ ಮಾತ್ರ ಹಣ ಬಂದಿಲ್ಲ ಮತ್ತೊಮ್ಮೆ ಟ್ರೈ ಮಾಡಿ ಎಂದಿದ್ದಾನಂತೆ. ಈ ಹಿನ್ನೆಲೆ ಮತ್ತೆ ಟ್ರಾನ್ಸಾಕ್ಷನ್ ಮಾಡಿ‌ದ್ದಾರೆ. ಆಗಲೂ ಹಣ ಕಟ್ ಆಗಿರುವುದರ‌ ಬಗ್ಗೆ ಮಾಹಿತಿ ಬಂದರೂ ಕೂಡ ಡ್ರೈವರ್ ಮಾತ್ರ ಹಣ ಬಂದಿಲ್ಲವೆಂದು ಸುಳ್ಳು ಹೇಳಿದ್ದಾನೆ.


ತಕ್ಷಣ ಪ್ರದೀಪ್ ಬ್ಯಾಂಕ್ ​ಗೆ ಕರೆ ಮಾಡಿ ವಿಚಾರಿಸಿದಾಗ ಡ್ರೈವರ್ ನಂಬರ್​ ಗೆ ಹಣ ಕ್ರೆಡಿಟ್ ಆಗಿರುವುದು ತಿಳಿದುಬಂದಿದೆ. ಡ್ರೈವರ್ ಮಾಡಿದ ಮೋಸದ ಬಗ್ಗೆ ಅರಿತ ಪ್ರದೀಪ್ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ‌.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ