ಸಕಲ ಇಷ್ಟಾರ್ಥಗಳು ನೆರವೇರಬೇಕಾದರೆ ಶಿವಾಲಯಕ್ಕೆ ಹೋದಾಗ ಶಿವನನ್ನು ಈ ರೀತಿಯಾಗಿ ಪೂಜಿಸಿ

ಭಾನುವಾರ, 7 ಜನವರಿ 2018 (06:21 IST)
ಬೆಂಗಳೂರು : ಸಕಲ ಸೃಷ್ಟಿಗೆ ಆದಿದಂಪತಿಗಳು ಪಾವರ್ತಿ ಪರಮೇಶ್ವರರು. ಹಾಗೆ ಸಮತ್ತ ಸೃಷ್ಟಿಗೆ ಲಯಕಾರಕನು ಪರಮೇಶ್ವರನು. ಆದಿದಂಪತಿಗಳ ಅನುಗ್ರಹವೊಂದಿದ್ದರೆ ಸಾಕು ಎಂತಹದೇ ಕಷ್ಟವಿದ್ದರೂ ಕೂಡ ನಿವಾರಣೆಯಾಗುತ್ತದೆ. ಸಾಧಾರಣವಾಗಿ ನಾವು ಶಿವಾಲಯಕ್ಕೆ  ಹೋದಾಗ ಶಿವನಿಗೆ, ನಂದಿಗೆ ಕೈಜೋಡಿಸಿ ನಮಸ್ಕರಿಸಿ ಗಂಟೆಹೊಡೆದು ತೀರ್ಥ, ಪ್ರಸಾದವನ್ನು ಸ್ವೀಕರಿಸಿ ವಾಪಾಸಾಗುತ್ತೇವೆ. ಆದರೆ ಇದು ಅಸಂಪೂರ್ಣವಾದ ಪ್ರಕ್ರಿಯೆ ಎಂದು ಹಿರಿಯರು ಹೇಳುತ್ತಾರೆ. ಹೀಗೆ ನಮಸ್ಕರಿಸುವುದು ಪದ್ಧತಿ ಅಲ್ಲ. ಶಿವನನ್ನು ಪೂಜಿಸಲು ಒಂದು ಪದ್ಧತಿ ಇದೆ. ಇತರ ದೇವತೆಗಳನ್ನು ಪೂಜಿಸುವಾಗ ಎದುರು ನಿಂತು ಗಂಟೆ ಹೊಡೆದು ನಮಸ್ಕರಿಸಿ ದರ್ಶನ ಪಡೆದರೆ ಸಾಕು ನಮ್ಮ ಸಕಲಾರ್ಥಗಳು ಈಡೇರುತ್ತದೆ. ಆದರೆ ಶಿವನನ್ನು ದರ್ಶಿಸಿ ಅದರ ಪ್ರತಿಫಲ ನಮಗೆ ಸಿಗಬೇಕೆಂದರೆ ಈ ಒಂದು ಕ್ರಮವನ್ನು ಪಾಲಿಸಿ.

 
ಶಿವಾಲಯಕ್ಕೆ ಹೋದಾಗ ಮೊದಲು ದರ್ಶನವಾಗುವುದು ನಂದಿ. ನಂದಿ ಕೇವಲ ಶಿವನ ವಾಹನ ಮಾತ್ರವಲ್ಲ, ಆತ ಶಿವನ ಪರಮಭಕ್ತನಾಗಿದ್ದನು. ಆದ್ದರಿಂದ ನಂದಿಯನ್ನು, ಪರಮೇಶ್ವರನನ್ನು ಪೂಜಿಸಿದಷ್ಟೇ ಶೃದ್ದೆ, ಭಕ್ತಿಯಿಂದ ಪೂಜಿಸಬೇಕು. ಬೇರೆ ದೇವರುಗಳನ್ನು ನಾವು ಆಯಾ ಮೂರ್ತಿಗಳಲ್ಲಿ ಹಾಗು ಮೂರ್ತಿಯ ಮೇಲೆ ದೃಷ್ಟಿ ಕೇಂದ್ರಿಕರಿಸಿ ಪ್ರಾರ್ಥಿಸಿ ಪೂಜಿಸುತ್ತೇವೆ. ಆದರೆ ಶಿವನನ್ನು ನಾವು ಲಿಂಗ ರೂಪದಲ್ಲಿ ಪೂಜಿಸುತ್ತೇವೆ. ಆದ್ದರಿಂದ ಶಿವಾಲಯಕ್ಕೆ ಹೋದಾಗ ನಂದಿಯ ಮೂಲಕ ಶಿವನ ದರ್ಶನ ಮಾಡಬೇಕು. ಅದು ಹೇಗೆಂದರೆ ನಂದಿಯ ಕೋಡುಗಳ ಮೂಲಕ ಸ್ವಾಮಿಯನ್ನು ನೋಡಿ ದರ್ಶಿಸಬೇಕು. ನಮ್ಮ ಬಲ ಕೈಯನ್ನು ನಂದಿಯ ಬಲ ಕೋಡಿನ ಮೇಲಿರಿಸಿ ಶಿವನ ದರ್ಶನ ಪಡೆದರೆ ತುಂಬಾ ಒಳ್ಳೆಯದು. ಇದರಿಂದ ನಮ್ಮ ದೃಷ್ಟಿ ಶಿವನ ಮೇಲೆ ನೇರವಾಗಿ ಕೇಂದ್ರಿಕರಿಸುತ್ತದೆ. ಹಾಗೆ ನಮ್ಮ ಕೋರಿಕೆಗಳನ್ನು ನಂದಿಯ ಕಿವಿಯಲ್ಲಿ ಹೇಳಿದರೆ ಅದು ಬೇಗ ಪರಮೇಶ್ವರನಿಗೆ ತಲುಪಿ ಈಡೇರುತ್ತದೆ ಎಂಬುದು ವಾಡಿಕೆ.

       
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ