ಲಕ್ಷ್ಮೀದೇವಿ ಒಲಿಯಬೇಕೆ...? ಈ ಹೂವಿನಿಂದ ಪೂಜಿಸಿ

ಭಾನುವಾರ, 31 ಡಿಸೆಂಬರ್ 2017 (06:37 IST)
ಬೆಂಗಳೂರು: ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತೆವೆ. ಕೆಲವರು ಲಕ್ಷ್ಮೀದೇವಿಗೆ ಪೂಜೆ ಮಾಡಿದರೆ ಆಕೆ ಒಲಿಯುತ್ತಾಳೆ, ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹೇಳುತ್ತಾರೆ. ಆದರೆ ಲಕ್ಷ್ಮೀ ಪೂಜೆ ಮಾಡಿದರೂ ಕೆಲವರಿಗೆ ಕಷ್ಟಕಾಲ ದೂರವಾಗುವುದಿಲ್ಲ. ಏಕೆಂದರೆ ನಮಗೆ ತಿಳಿಯದೆ ಮಾಡುವ ಒಂದು ತಪ್ಪು ಏನೆಂದರೆ ನಾವು ಮಾಡಿರುವ ಲಕ್ಷ್ಮೀ ಪೂಜೆ ಪೂರ್ಣವೇ ಆಗಿರುವುದಿಲ್ಲ. ಏಕೆಂದರೆ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಒಂದು ಹೂವನ್ನು ಅರ್ಪಿಸಲೇ ಬೇಕು. ಇಲ್ಲವಾದರೆ ಲಕ್ಷ್ಮೀ ಒಲಿಯುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ.

 
ಲಕ್ಷ್ಮೀ ಪೂಜೆ ಮಾಡುವಾಗ ಏನು ಇಡದಿದ್ದರೂ ಪರವಾಗಿಲ್ಲ.ಆದರೆ ಕಮಲದ ಹೂವನ್ನು ಮಾತ್ರ ಇಡಲೇಬೇಕು. ಅದರಲ್ಲೂ ಶುಕ್ರವಾರ ಏಕದಶಿಯ ದಿನ ಒಂದಾದರು ಕಮಲದ ಹೂವನ್ನು ಲಕ್ಷ್ಮೀದೇವಿಗೆ ಅರ್ಪಿಸಿದರೆ  ಆಕೆ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.
 



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ