ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 3 ಮಾರ್ಚ್ 2019 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮನೆ ರಿಪೇರಿ, ನವೀಕರಣದಲ್ಲಿ ತೊಡಗಿಸಿಕೊಳ್ಳುವಿರಿ. ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಸಂಗಾತಿ ಜತೆ ಮನಸ್ತಾಪಕ್ಕಿಂತ ಮೌನವಾಗಿರುವುದೇ ಲೇಸು.

ವೃಷಭ: ಎಂದೋ ಮಾಡಿದ ನಿಮ್ಮ ಒಳ್ಳೆಯ ಕೆಲಸಗಳು ಇಂದು ಪ್ರಯೋಜನಕ್ಕೆ ಬರಲಿವೆ. ನಿಮ್ಮ ವ್ಯಕ್ತಿತ್ವದಿಂದಲೇ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಕೊಂಚ ಅಡಚಣೆಯಾದೀತು.

ಮಿಥುನ: ಯಾವುದೇ ಕೆಲಸಕ್ಕೆ ಹೊರಡುವುದಿದ್ದರೂ ಮನೆ ದೇವರಿಗೆ ಪ್ರಾರ್ಥನೆ ಮಾಡಿ ಹೊರಡಿ. ಇದರಿಂದ ಕಾರ್ಯಸಿದ್ಧಿ. ಯೋಜಿತ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಆರ್ಥಿಕವಾಗಿ ಹೊರೆ ಬೀಳದಂತೆ ನೋಡಿಕೊಳ್ಳಿ.

ಕರ್ಕಟಕ: ಕುಟುಂಬದಲ್ಲಿ ನಿಮ್ಮ ಜವಾಬ್ಧಾರಿಗಳು ಹೆಚ್ಚುವುದು. ಆದಾಯ ಹೆಚ್ಚುವುದು. ಆರ್ಥಿಕವಾಗಿ ಸಾಕಷ್ಟು ಲಾಭ ಗಳಿಸುವುದರಿಂದ ಖರ್ಚಿನ ಬಗ್ಗೆಯೂ ಚಿಂತನೆ ಮಾಡುವಿರಿ. ಹೊಸ ವಸ್ತುಗಳ ಖರೀದಿಗೆ ಮನಸ್ಸಾಗುವುದು.

ಸಿಂಹ: ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬರುವುದು. ಆದರೆ ಹಿತಶತ್ರುಗಳಿಂದ ವಿವಾಹಕ್ಕೆ ಅಡ್ಡಿ ಬರುವುದು. ಮಾತಿನ ಮೇಲೆ ನಿಗಾ ಇರಲಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ನೂತನ ದಂಪತಿಗಳಿಗೆ ಸಂತಾನ ಭಾಗ್ಯ ದೊರಕುವುದು. ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗುವುದು. ತಾಳ್ಮೆಯಿಂದ ಹೆಜ್ಜೆಯಿಡಿ.

ತುಲಾ: ಮನೆಯಲ್ಲಿ ಒಂದು ರೀತಿಯ ಬಿಗುವಿನ ವಾತಾವರಣವಿರುವುದು. ಸಂಗಾತಿ ಜತೆಗೆ ಮನಸ್ತಾಪ ಮಾಡಿಕೊಳ್ಳುತ್ತೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಆದರೆ ಉದ್ಯೋಗ ಕ್ಷೇತ್ರದ ಬಗ್ಗೆ ಚಿಂತೆಯಾಗುವುದು. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯುವುದು ಒಳ್ಳೆಯದು.

ವೃಶ್ಚಿಕ: ಮನಸ್ಸಿಗೆ ಅಂಟಿಕೊಂಡ ಅಂಜಿಕೆಯಿಂದ ನೀವು ಉದ್ದೇಶಿಸಿದ ಕಾರ್ಯಗಳು ಸಫಲವಾಗದು. ದಾಯಾದಿಗಳು ಸದಾ ನಿಮಗೆ ತೊಂದರೆ ಕೊಡುತ್ತಿರುವವರು. ಬಹುದಿನಗಳಿಂದ ಬಾಕಿಯಿದ್ದ ಹರಕೆ ತೀರಿಸಿ. ದೈವ ಕಾರ್ಯದಿಂದ ಮನಸ್ಸಿಗೂ ನೆಮ್ಮದಿ.

ಧನು: ಬಿಡುವಿನ ವೇಳೆಯ ಖುಷಿ ಅನುಭವಿಸಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ಅಶುಭದ ವಾರ್ತೆ ಕೇಳಿಬಂದೀತು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿಬರುತ್ತದೆ.

ಮಕರ: ಹೊಸ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ವಾಹನ ಚಾಲನೆ ಮಾಡುವವರಿಗೆ ಅಪಘಾತದ ಭಯವಿದೆ. ಪಾಲು ವ್ಯವಹಾರದಲ್ಲಿ ಸಾಕಷ್ಟು ಆದಾಯ ಗಳಿಸುವಿರಿ. ಸಹೋದದರಿಂದ ಸಂತಸ.

ಕುಂಭ: ಸಂವಹನ ಕೊರತೆಯಿಂದ ಕೆಲವೊಂದು ಕೆಲಸಗಳು ಅರ್ಧಕ್ಕೇ ನಿಲ್ಲುವುದು. ಸ್ವ ವೃತ್ತಿಯವರಿಗೆ ಆರ್ಥಿಕ ಮುಗ್ಗಟ್ಟು ಎದುರಾಗುವುದು. ಇದರಿಂದ ಮನಸ್ಸಿಗೆ ಬೇಸರ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ತಾಳ್ಮೆಯಿಂದಿದ್ದರೆ ದಿನದಂತ್ಯಕ್ಕೆ ಶುಭ ಸುದ್ದಿ.

ಮೀನ: ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಸಾಲಗಾರರು ಸಾಲ ಮರುಪಾವತಿ ಮಾಡಿ ಆರ್ಥಿಕ ಲಾಭವಾಗುವುದು. ಸಹೋದರರೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವಿವಾದವಾಗಬಹುದು. ಹಿರಿಯರ ಸಲಹೆಗಳಿಗೆ ಕಿವಿಗೊಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ