ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 14 ಆಗಸ್ಟ್ 2019 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಗೊಂದಲದ ವಾತಾವರಣ ಮುಂದುವರಿಯಲಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳೂ ಕಾಡಲಿವೆ. ನಿರ್ಧಾರ ತೆಗೆದುಕೊಳ್ಳುವಾಗ ಸಂದಿಗ್ಧತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವ್ಯಾಪಾರದಲ್ಲಿ ಚೇತರಿಕೆ.

ವೃಷಭ: ದೈವಾನುಕೂಲದಿಂದ ಅಂದುಕೊಂಡ ಕಾರ್ಯ ಸುಲಭವಾಗಿ ನೆರವೇರಿಸುವಿರಿ. ಆದರೆ ಮೈ ಕೈ ನೋವು ಇತ್ಯಾದಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡುವುದು. ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಂಡುಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಗಮನವಿರಲಿ.

ಮಿಥುನ:  ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳು ತೋರಿಬರಲಿವೆ. ನೀವು ಅತೀವ ನಂಬಿಕೆಯಿಟ್ಟಿದ್ದವರೇ ನಿಮಗೆ ವಿಶ್ವಾಸ ದ್ರೋಹ ಮಾಡುವರು. ಸಾಂಸಾರಿಕವಾಗಿ ಹೊಂದಾಣಿಕೆಯಿಂದ ನಡೆದುಕೊಂಡರೆ ನೆಮ್ಮದಿ.ವ್ಯಾಪಾರಿಗಳಿಗೆ ಕೊಂಚ ಹಿನ್ನಡೆಯಾಗಬಹುದು.

ಕರ್ಕಟಕ: ದೈವಾನುಗ್ರಹದಿಂದ ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ಕಾರ್ಯಗಳಿಗೆ ಕೈ ಹಾಕುವಿರಿ. ನೌಕರ ವರ್ಗದವರಿಗೆ ಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗವಾಕಾಶಗಳು ದೊರಕಲಿವೆ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಆರ್ಥಿಕವಾಗಿ ಲಾಭ ಗಳಿಸಲಿದ್ದು, ನೀವು ಅಂದುಕೊಂಡಂತಹ ಅನೇಕ ಯೋಜನೆಗಳನ್ನು ಪೂರ್ತಿ ಮಾಡುವಿರಿ. ದೂರ ಸಂಚಾರ ಮಾಡುವಾಗ ಎಚ್ಚರಿಕೆಯಿಂದಿರುವುದು ಮುಖ್ಯ. ಸಂಗಾತಿಯ ಸಲಹೆಗಳು ಪಥ್ಯವಾಗದೇ ಇರಬಹುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಕನ್ಯಾ: ಸಾಂಸಾರಿಕವಾಗಿ ಹಲವು ಕಿರಿ ಕಿರಿಗಳು ನಿಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಲಿವೆ. ಆದರೆ ಮನೆಯವರ ಸಹಕಾರ, ಸಾಂತ್ವನ ಸಿಗುವುದು. ವ್ಯವಹಾರದಲ್ಲಿ ಹೆಚ್ಚಿನ ಗಮನವಹಿಸಬೇಕು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ತುಲಾ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಸಂಗಾತಿಗೆ ಆಭರಣ ಖರೀದಿ ಮಾಡುವಿರಿ. ಆರೋಗ್ಯದಲ್ಲಿ ಎಚ್ಚರಿಕೆಯಿರಲಿ.

ವೃಶ್ಚಿಕ: ಆರ್ಥಿಕವಾಗಿ ಚೇತರಿಕೆ ಕಂಡುಬಂದರೂ ಹೊಸ ಯೋಜನೆಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಸೂಕ್ತ. ಅಪರಿಚಿತರನ್ನು ನಂಬಿ ಹೂಡಿಕೆ ಮಾಡಬೇಡಿ. ಕೃಷಿ ಕ್ಷೇತ್ರದಲ್ಲಿರುವವರಿಗೆ ನಷ್ಟದ ಸಾಧ‍್ಯತೆ. ವಾಹನ ಸವಾರರು ಎಚ್ಚರಿಕೆಯಿಂದಿರುವುದು ಮುಖ್ಯ.

ಧನು: ಆಗಾಗ ಪ್ರತಿಕೂಲ ವಾತಾವರಣದಿಂದ ನೀವು ಉದ್ದೇಶಿಸಿದ ಕಾರ್ಯಗಳು ನೆರವೇರದೇ ಇರಬಹುದು. ಸಹೋದರ ಸಂಬಂಧಿಗಳಿಂದ ಚಾಡಿ ಮಾತು ಕೇಳಿಬಂದೀತು. ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಮಕರ: ಅಭಿವೃದ್ಧಿಯತ್ತ ಸಾಗುವಿರಿ. ಬಹುದಿನಗಳ ಕನಸು ಈಡೇರುವುದು. ವಾಹನ, ಆಸ್ತಿ ಖರೀದಿ ಯೋಗವಿದೆ. ಆದರೆ ಕುಲದೇವರ ಪ್ರಾರ್ಥನೆ ಮಾಡಿ ಹೊಸ ಕೆಲಸಗಳಿಗೆ ಕೈ ಹಾಕುವುದು ಒಳಿತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು ನೆಮ್ಮದಿ ಮೂಡುವುದು.

ಕುಂಭ: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಮೂಡುವುದು. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ ಕಾದಿದೆ.

ಮೀನ: ಏನೋ ಒಂದು ರೀತಿಯ ಮಾನಸಿಕ ಬೇಸರ ಕಾಡುವುದು. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಮಹಿಳಾ ಉದ್ಯೋಗಿಗಳು ಶುಭ ಫಲ ಪಡೆಯುವರು. ಮನಸ್ಸಿನ ಆತಂಕ ನಿವಾರಣೆಗೆ ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ