ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 18 ಆಗಸ್ಟ್ 2019 (09:07 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

ಮೇಷ: ಪರಿಹಾರವಾಗಿದೆ ಎಂದುಕೊಂಡಿದ್ದ ಸಮಸ್ಯೆಗಳು ಮತ್ತೆ ಧುತ್ತನೆ ಎದುರಾಗಿ ತಲೆನೋವಿಗೆ ಕಾರಣವಾಗಲಿದೆ. ಕಾರ್ಯದೊತ್ತಡದಿಂದ ಚಿಂತೆ, ಬೇಸರ ಮೂಡುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ವೃಷಭ: ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಕ್ಕೆ ಬೀಳುವಿರಿ. ಇದರಿಂದ ಕಾರ್ಯ ವಿಳಂಬವಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ದೈಹಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಮಿಥುನ: ಸಾಂಸಾರಿಕವಾಗಿ ಸಂಬಂಧಗಳಲ್ಲಿ ಬಿರುಕು ಮೂಡಲಿವೆ. ಕ್ಷುಲ್ಲುಕ ಕಾರಣಕ್ಕೆ ಕಲಹಗಳು ಉಂಟಾಗಬಹುದು. ಮಾತಿನ ಮೇಲ ನಿಗಾ ಇರಲಿ. ಹಿರಿಯರ ಸೂಕ್ತ ಸಲಹೆಗಳಿಗೆ ಕಿವಿಗೊಡಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಿಸುವಿರಿ.

ಕರ್ಕಟಕ: ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಮುದವಾಗುವುದು. ಪ್ರೇಮಿಗಳ ಪಾಲಿಗೆ ಸಂತಸದ ದಿನವಾಗಲಿದೆ. ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಹಿನ್ನಡೆಯದೀತು. ದೇವರ ಪ್ರಾರ್ಥನೆ ಮಾಡಿ.

ಸಿಂಹ: ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಹಾಗಿದ್ದರೂ ನೀವು ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಕನ್ಯಾ: ಅನವಶ್ಯಕವಾಗಿ ಚಿಂತೆ ಬೇಡ. ನಿರಾಶಾದಾಯಕ ಸುದ್ದಿ ಕೇಳಿಬಂದರೂ ತಾಳ್ಮೆ ಕಳೆದುಕೊಳ್ಳಬೇಡಿ. ಇತರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಉದ್ಯೋಗ ಕ್ಷೇತ್ರದಲ್ಲಿ ಚಾಡಿ ಮಾತು ಕೇಳಿಬಂದೀತು. ಆದರೆ ನಿಮ್ಮ ಮುನ್ನಡೆಯನ್ನು ಯಾರೂ ತಡೆಯಲಾಗದು.

ತುಲಾ: ವೃತ್ತಿರಂಗದಲ್ಲಿ ಅನವಶ್ಯಕವಾಗಿ ಗೊಂದಲದ ಸ್ಥಿತಿ ನಿರ್ಮಾಣವಾಗಲಿದೆ. ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಗಮನಕೊಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ವೃಶ್ಚಿಕ: ಹಿರಿಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಕೆಲವೊಂದು ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಪ್ರೀತಿ ಪಾತ್ರರ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಕಿರು ಸಂಚಾರ ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ಕಾಳಜಿಯಿರಲಿ.

ಧನು: ನೀವು ಅತಿಯಾಗಿ ನಂಬಿದವರಿಂದಲೇ ವಂಚನೆಗೊಳಗಾಗುವಿರಿ. ಇದರಿಂದ ಮನಸ್ಸಿಗೆ ಬೇಸರವಾಗಬಹುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಕಾರ್ಯನಿಮಿತ್ತ ಹೊಸ ಜನರ ಭೇಟಿ ಸಾಧ‍್ಯತೆಯಿದೆ. ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆಯಿರಲಿ.

ಮಕರ: ಯಾಕೋ ಎಷ್ಟೇ ದುಡಿದರೂ ಅಷ್ಟು ಫಲ ಕೈಗೆ ಬರುತ್ತಿಲ್ಲ ಎಂಬ ಭಾವನೆ ಬರಲಿದೆ. ನಿರ್ಧಾರ ತೆಗೆದುಕೊಳ್ಳಲು ಸೋಲುವಿರಿ. ಹಿರಿಯರ ಸಲಹೆ ಪಡೆಯಿರಿ. ಉದ್ಯೋಗಿಗಳಿಗೆ ವೃತ್ತಿ ಬದಲಾವಣೆ ಸಾಧ್ಯತೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಕುಂಭ: ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಲಿದೆ. ನಿಮ್ಮ ಕೆಲವೊಂದು ನಿರ್ಧಾರಗಳು ಸಂಗಾತಿಯ ಅಸಹನೆಗೆ ಕಾರಣವಾಗಲಿದೆ. ಯಾರೊಂದಗೂ ಸಂಘರ್ಷಕ್ಕೆ ಇಳಿಯದಂತೆ ಎಚ್ಚರವಹಿಸಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ.  

ಮೀನ: ವತ್ತಿ ರಂಗದಲ್ಲಿ ದುಡುಕಿನ ವರ್ತನೆಯಿಂದ ಕಾರ್ಯ ಹಾಳುಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶ ಯಾನ ಸಾಧ‍್ಯತೆ. ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ದಿನದಂತ್ಯಕ್ಕೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ