ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 25 ಸೆಪ್ಟಂಬರ್ 2019 (08:36 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭವಾಗಲಿದೆ. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳೂ ಮುನ್ನಡೆ ಸಾಧಿಸುವರು.

ವೃಷಭ: ಮನೆಯಲ್ಲಿ ಇದುವರೆಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ತುಸು ಸಮಾಧಾನಕರ ವಾತಾವರಣವಿರುವುದು. ಅನಿರೀಕ್ಷಿತ ಖರ್ಚು ವೆಚ್ಚಗಳು ಬಂದೊದಗಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಮಿಥುನ: ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಕಂಡುಬರಲಿವೆ. ದುರ್ಜನರ ಸಂಗದಿಂದ ಆದಷ್ಟು ದೂರವಿರುವುದೇ ಉತ್ತಮ. ಪ್ರೇಮಿಗಳ ವಿಚಾರ ಮನೆಯವರ ಮುಂದೆ ಪ್ರಕಟವಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಕರ್ಕಟಕ: ನಿಮ್ಮ ವ್ಯಾಪಾರ  ವ್ಯವಹಾರದಲ್ಲಿ ಸಾಕಷ್ಟು ಅಭಿವೃದ್ಧಿ ತೋರಿಬರಲಿದ್ದು, ಉತ್ತಮ ಆದಾಯ ಗಳಿಸುವಿರಿ. ಆದರೆ ಅತಿಯಾದ ವಿಶ್ವಾಸದಿಂದ ತೊಂದರೆಗೆ ಸಿಲುಕಿಕೊಳ್ಳಬೇಕಾಗಬಹುದು. ಕೌಟುಂಬಿಕವಾಗಿ ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ.

ಸಿಂಹ: ಅನಿರೀಕ್ಷಿತ ರೂಪದಲ್ಲಿ ಧನಲಾಭವಾಗಲಿದೆ. ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ಸಂಗಾತಿಯ ಮನಸ್ಸು ಅರ್ಥಮಾಡಿಕೊಂಡು ನಡೆಯಬೇಕಿದೆ. ದೇಹಾರೋಗ್ಯದ ಸಮಸ್ಯೆಗಳು ಕಂಡುಬರಲಿವೆ. ಎಚ್ಚರಿಕೆ ಅಗತ್ಯ.

 
ಕನ್ಯಾ: ನಿಮ್ಮ ಆಲಸ್ಯತನ ಮನೋಭಾವದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುವುದು. ಉದ್ಯೋಗದಲ್ಲಿ ಕಾರ್ಯದೊತ್ತಡವಿದ್ದು, ಮೇಲಧಿಕಾರಿಗಳ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ.

ತುಲಾ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ವೈವಾಹಿಕ ಸಂಬಂಧಗಳಲ್ಲಿ ಮುನ್ನಡೆ. ನಿಮ್ಮ ಆತ್ಮ ಸ್ಥೈರ್ಯ ಕಷ್ಟ ಕಾಲದಲ್ಲಿ ನೆರವಿಗೆ ಬರಲಿದೆ. ದೇವತಾ ದರ್ಶನ ಪಡೆಯುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ‍್ಯತೆ. ಕಿರು ಸಂಚಾರ ಯೋಗವಿದೆ.

ವೃಶ್ಚಿಕ: ನೀವು ಮಾಡುವ ಸಣ್ಣ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾದೀತು. ನಿವಾರಣೆಯಾಗಿದೆ ಎಂದು ಅಂದುಕೊಂಡಿದ್ದ ಸಮಸ್ಯೆಗಳು ಮತ್ತೆ ಪ್ರತ್ಯಕ್ಷವಾಗಲಿದೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.

ಧನು: ನಿಮ್ಮ ಅಭಿಪ್ರಾಯಗಳಿಗೆ ವಿರೋಧ ಹೆಚ್ಚಾಗುವುದು. ಹಾಗಿದ್ದರೂ ನಿಮ್ಮ ನಿಲುವು ಬದಲಿಸದೇ ಇರುವುದು ಉತ್ತಮ. ನಿಮಗೆ ಆಸಕ್ತಿ ಇರುವ ಕೆಲಸಗಳನ್ನು ಮಾಡುತ್ತಿರಿ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ವಿದ್ಯಾರ್ಥಿಗಳಿಗೆ ಶುಭ ಫಲವಿದೆ.

ಮಕರ: ಹೊಸ ಗೆಳೆಯರನ್ನು ಸಂಪಾದಿಸುವಿರಿ. ಆರ್ಥಿಕ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಹೊಸ ವಸ್ತುಗಳ ಖರೀದಿಗೆ ಮುಂದಾಗುವಿರಿ. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಹಿರಿಯರ ಸಲಹೆ ಪಾಲಿಸಿ. ಆರೋಗ್ಯದ ಬಗ್ಗೆ ಎಚ್ಚರವಾಗಿರಿ.

ಕುಂಭ: ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ. ವಾಗ್ವಾದಗಳಿಂದ ದೂರವಿದ್ದಷ್ಟು ಉತ್ತಮ. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಾಹನ ಸವಾರರು ಎಚ್ಚರವಾಗಿರಬೇಕು.

ಮೀನ: ಸಾಂಸಾರಿಕ ಸಂಬಂಧಗಳಲ್ಲಿ ಇದ್ದ ಮುನಿಸು ಮರೆಯಾಗಿ ನೆಮ್ಮದಿ ಮೂಡುವುದು. ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದೆ. ನಿರುದ್ಯೋಗಿಗಳಿಗೆ ಹಲವು ಉದ್ಯೋಗಾವಕಾಶಗಳು ಒದಗಿ ಬರಲಿವೆ. ಗೃಹಿಣಿಯರಿಗೆ ವಸ್ತ್ರ, ಧನ ಲಾಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ