ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 8 ನವೆಂಬರ್ 2019 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಉತ್ಸಾಹದಾಯಕ ವಾತಾವರಣವಿರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬಂದು ಅಭಿವೃದ್ಧಿ ಕಂಡುಬರುವುದು. ಸಣ್ಣ ಪುಟ್ಟ ವಿಚಾರಗಳಿಗೆ ಕೊರಗುವುದನ್ನು ಬಿಡಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ.

ವೃಷಭ: ಸ್ವಾಭಿಮಾನಕ್ಕೆ ಧಕ್ಕೆಯಾಗುವ ಪ್ರಸಂಗಗಳು ಎದುರಾಗಬಹುದು. ತಾಳ್ಮೆಯಿಂದ ಮುಂದುವರಿಯಬೇಕು. ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ವೃತ್ತಿರಂಗದಲ್ಲಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಆರ್ಥಿಕವಾಗಿ ಚೇತರಿಕೆ ಇರುವುದು.

ಮಿಥುನ: ವ್ಯವಹಾರದಲ್ಲಿ ಲಾಭ ಕಂಡುಬಂದು, ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ಮಾನಸಿಕವಾಗಿ ಸಂತೋಷ ಕಾಣುವಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ.

ಕರ್ಕಟಕ: ಕೌಟುಂಬಿಕವಾಗಿ ಬರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗವಾಕಾಶಗಳು ಕೂಡಿಬರಲಿವೆ.

ಸಿಂಹ: ಅನಿರೀಕ್ಷಿತ ರೂಪದಲ್ಲಿ ಧನಾಗಮನವಾಗಲಿದೆ. ಸನ್ಮಿತ್ರರ ಭೇಟಿ, ಸಹವಾಸ ಮನಸ್ಸಿಗೆ ಇನ್ನಷ್ಟು ನೆಮ್ಮದಿ ಕೊಡುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡುವಾಗ ಎಚ್ಚರವಿರಬೇಕು. ಮಾನಸಿಕವಾಗಿ ಕಿರಿ ಕಿರಿ ಇರಲಿದೆ. ತಾಳ್ಮೆ ಇರಲಿದೆ.

 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಅನವಶ್ಯಕ ತಪ್ಪುಗಳಿಂದ ಮೇಲಧಿಕಾರಿಗಳಿಂದ ಬೈಸಿಕೊಳ್ಳಬೇಕಾಗಬಹುದು. ಎಚ್ಚರಿಕೆಯಿಂದ ವ್ಯವಹರಿಸಬೇಕು. ಮಾನಸಿಕವಾಗಿ ಚಿಂತೆ ಕಾಡಲಿದೆ. ಮಕ್ಕಳಿಂದ ಸಂತಸ ಸಿಗುವುದು. ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಕಂಡುಬರಬಹುದು. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಸಂಕಷ್ಟದ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ, ಸಮಯ ಪ್ರಜ್ಞೆಯೇ ನಿಮ್ಮನ್ನು ಕಾಪಾಡಲಿದೆ. ಅನಗತ್ಯ  ವಿವಾದಗಳಿಮದ ದೂರವಿರುವುದು ಒಳಿತು. ಆರ್ಥಿಕವಾಗಿ ಆದಾಯ ಉತ್ತಮವಾಗಿರುವುದು. ಕೊಡು ಕೊಳ್ಳುವಿಕೆ ವ್ಯವಹಾರದಲ್ಲಿ ಲಾಭ ಕಂಡುಬರುವುದು.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಆಗ್ರಹಿಸುವುದು. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಟು ಮಾಡುವಿರಿ.  ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಕಿರು ಸಂಚಾರ ಯೋಗವಿದೆ.

ಧನು: ಹಂತ ಹಂತವಾಗಿ ಅಭಿವೃದ್ಧಿ ತೋರಿಬರಲಿದೆ. ಚಿಂತೆ ಬೇಕಾಗಿಲ್ಲ. ಸಂಗಾತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು. ಆದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜವಾಬ್ಧಾರಿ ನಿಮ್ಮ ಮೇಲಿರುತ್ತದೆ. ಹೊಸ ಮಿತ್ರರ ಭೇಟಿ ಮಾಡುವಿರಿ.

ಮಕರ: ಎಚ್ಚರಿಕೆ, ಜವಾಬ್ಧಾರಿಯಿಂದ ನಡೆದುಕೊಂಡರೆ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೈಲಾಗಬಹುದಾದ ಅನಾಹುತ ತಪ್ಪಿಸಿಕೊಳ್ಳಬಹುದು. ಕೆಳ ಹಂತದ ನೌಕರರಿಗೆ ಬಡ್ತಿ ಯೋಗವಿದೆ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಸಾಧ‍್ಯತೆಯಿದೆ. ಎಚ್ಚರಿಕೆ ಅಗತ್ಯ.

ಕುಂಭ: ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ. ಭೂಮಿ, ಮನೆ ಖರೀದಿ ವ್ಯವಹಾರಗಳಿಗೆ ಸಕಾಲ.

ಮೀನ: ಆತ್ಮಗೌರವಕ್ಕೆ ಧಕ್ಕೆಯಾಗುವಂತಹ ಘಟನೆಗಳು ನಡೆಯಬಹುದು. ಎಚ್ಚರಿಕೆಯಿಂದಿರಬೇಕು. ಪಾಲು ಬಂಡವಾಳ ಹೂಡಿಕೆಗೆ ಕೆಲವು ದಿನ ಕಾಯುವುದು ಒಳಿತು. ಪ್ರಯತ್ನವಿದ್ದರೆ ಅದಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ