ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 25 ಏಪ್ರಿಲ್ 2020 (09:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅತಿಯಾದ ನಯ ವರ್ತನೆ ತೋರುವವರ ಜತೆಗೆ ಎಚ್ಚರಿಕೆಯಿಂದ ವ್ಯವಹರಿಸಿ. ಕಂಡಿದ್ದೆಲ್ಲವನ್ನೂ ಖರೀದಿಸುವ ಬಯಕೆಯಾಗಬಹುದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಕಾರ್ಯರಂಗದಲ್ಲಿ ಉನ್ನತ ಸ್ಥಾನ ಮಾನದ ಯೋಗವಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ವೃಷಭ: ಸ್ನೇಹಿತರ ಕಷ್ಟಕ್ಕೆ ಮರುಗಿ ಸಹಾಯ ಮಾಡಲು ಮುಂದಾಗುವಿರಿ. ಇಷ್ಟದೇವರಿಗೆ ಹರಕೆ, ಪ್ರಾರ್ಥನೆ ಸಲ್ಲಿಸಲಿದ್ದೀರಿ. ಸಾಧು ಸಂತರ ಭೇಟಿ ಸಂಭವ. ಮಹಿಳೆಯರಿಗೆ ತವರಿನಿಂದ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಿಥುನ: ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂದರೂ ಅನಿವಾರ್ಯವಾಗಿ ಕಿರು ಸಂಚಾರ ಮಾಡಬೇಕಾಗಿಬರುತ್ತದೆ. ಮಾನಸಿಕವಾಗಿ ಆತ್ಮಸ್ಥೈರ್ಯದಿಂದ ಮುನ್ನಗ್ಗಿದರೆ ಕೈ ಹಿಡಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಕರ್ಕಟಕ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗದ ಜತೆಗೆ ಜವಾಬ್ಧಾರಿಯೂ ಹೆಚ್ಚಲಿದೆ. ಆರ್ಥಿಕವಾಗಿ ಕಠಿಣ ಪರಿಸ್ಥಿತಿಗೆ ಇಂದೇ ಸಿದ್ಧರಾಗಬೇಕಾಗುತ್ತದೆ. ಮನದೆನ್ನೆಯ ಅಸಮಾಧಾನಕ್ಕೆ ಗುರಿಯಾಗುವಿರಿ. ತಾಳ್ಮೆ ಅಗತ್ಯ.

ಸಿಂಹ: ನಿಮ್ಮ ಸಿದ್ಧಸೂತ್ರಗಳನ್ನಿಟ್ಟುಕೊಂಡು ಸಮಸ್ಯೆ ಬಗೆಹರಿಸಲಾಗದು. ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ನೆರೆಹೊರೆಯವರ ಚಾಡಿ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಂಗಾತಿಯ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ದುಡುಕಿ ನಿರ್ಧಾರ ತೆಗೆದುಕೊಳ್ಳಲು ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ಹಿರಿಯರ ಹಿತವಚನಗಳು ಅಪಥ್ಯವೆನಿಸಬಹುದು. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ತುಲಾ: ಕೌಟುಂಬಿಕವಾಗಿ ತಲೆದೋರುವ ಸಮಸ್ಯೆಗಳನ್ನು ಹಿರಿಯರ ಮಧ‍್ಯಸ್ಥಿಕೆಯಿಂದ ಬಗೆಹರಿಸಿರಿ. ಆರ್ಥಿಕವಾಗಿ ಆದಾಯವಿದ್ದರೂ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ನಿರುದ್ಯೋಗಿಗಳು ಸ್ವ ಉದ್ಯೋಗ ಕಂಡುಕೊಳ್ಳಲಿದ್ದಾರೆ. ದುರಾಸೆ ಬೇಡ.

ವೃಶ್ಚಿಕ: ಇನ್ನೂ ಹೆಚ್ಚು ಆದಾಯ ಗಳಿಸಬೇಕೆಂಬ ದುರಾಸೆಯಿಂದ ಸಂಕಷ್ಟಕ್ಕೀಡಾಗಲಿದ್ದೀರಿ. ಅಪರಿಚಿತರನ್ನು ನಂಬಿ ಹೂಡಿಕೆ ಮಾಡಲು ಹೋಗಬೇಡಿ. ಹೊಸ ಯೋಜನೆಗಳನ್ನು ಆರಂಭಿಸಲು ಕೆಲವು ದಿನ ಕಾಯುವುದು ಉತ್ತಮ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಧನು: ಮಕ್ಕಳ ವಿಚಾರದಲ್ಲಿ ವೃಥಾ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರಲು ಹೋಗಬೇಡಿ. ಸಾಂಸಾರಿಕವಾಗಿ ನೀವು ಕೈಗೊಳ್ಳುವ ನಿರ್ಧಾರಗಳು ಇತರರ ಮನಸ್ಸಿಗೆ ಬೇಸರವಾಗದಂತೆ ಎಚ್ಚರಿಕೆ ವಹಿಸಿ.

ಮಕರ: ಆದಾಯ ವೃದ್ಧಿಗೆ ನಾನಾ ದಾರಿಗಳನ್ನು ಹುಡುಕಾಡುವಿರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯ ಅಭಿಪ್ರಾಯ ಪಡೆದರೆ ಉತ್ತಮ. ಮಕ್ಕಳ ವಿಚಾರದಲ್ಲಿ ಚಿಂತೆಯಾಗಬಹುದು. ಉದ್ಯೋಗಸ್ಥರಿಗೆ ಭವಿಷ್ಯದ ಚಿಂತೆ ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಮನಸ್ಸಿಗೆ ಇಷ್ಟವಾದವರ ಜತೆ ಮಾತನಾಡಲು ಸಾಧ‍್ಯವಾಗದೇ ಬೇಸರ ಕಾಡಲಿದೆ. ಪ್ರೇಮಿಗಳಿಗೆ ಅಗಲುವಿಕೆಯ ನೋವು ಕಾಡಲಿದೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಉದ್ಯೋಗದಲ್ಲಿ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ.

ಮೀನ: ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಿ ನೀವು ಮಾಡಬೇಕಿದ್ದ ಕಾರ್ಯಗಳಿಗೆ ಅಡೆತಡೆಯಾಗುವುದು. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಹಳೆಯ ಸಂಬಂಧಗಳು ಮರಳಿ ಬೆಸೆಯಲಿವೆ. ದಿನದಂತ್ಯಕ್ಕೆ ಶುಭ ಸುದ್ದಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ