ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 8 ಜೂನ್ 2020 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಮಾತಿನಿಂದ ಇತರರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮಾಡಿಕೊಳ್ಳಬಹುದು. ವ್ಯಾಪಾರಿಗಳಿಗೆ ಆತಂಕದ ಕ್ಷಣಗಳು ಎದುರಾದೀತು. ಭೂ ಖರೀದಿಗೆ ಸೂಕ್ತ ದಿನವಾಗಿರಲಿದೆ. ಹಿರಿಯರ ಸಲಹೆ ಪಡೆಯಿರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸಿನ ಹಾದಿ ಗೋಚರವಾಗಲಿದ್ದು, ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿ ಮುಂದುವರಿಯಬೇಕು. ವ್ಯಾಪಾರಿಗಳಿಗೆ ವೃತ್ತಿಯಲ್ಲಿ ಲಾಭವಾಗಲಿದೆ. ಆರೋಗ್ಯಕ್ಕಾಗಿ ವೈದ್ಯರ ಭೇಟಿಯಾಗಲಿದ್ದೀರಿ. ಚಿಂತೆ ಬೇಡ.

ಮಿಥುನ: ಹಿತ ಶತ್ರುಗಳ ಬಾಧೆಯಿಂದ ಉದ್ಯೋಗದಲ್ಲಿ ಅಡೆತಡೆಗಳು ಎದುರಾದೀತು. ಕುಟುಂಬದ ಹಿರಿಯರ ಯೋಗ ಕ್ಷೇಮದ ಬಗ್ಗೆ ಗಮನಕೊಡಿ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ಕರ್ಕಟಕ: ಅನ್ಯರ ಮಾತಿನಿಂದ ಮನಸ್ಸಿಗೆ ನೋವುಂಟಾಗಬಹುದು. ದೇವತಾ ಕಾರ್ಯಗಳಿಗೆ ಖರ್ಚು ವೆಚ್ಚಗಳಾಗಲಿವೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಸಿಂಹ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಪ್ರಗತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಸಂದರ್ಶನ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಕೃಷಿಕರಿಗೆ ವ್ಯವಹಾರಕ್ಕೆ ಪೂರಕ ವಾತಾವರಣ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟು ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಮನಸ್ಸಿನ ನೆಮ್ಮದಿಗೆ ಭಂಗ ತರುವ ಘಟನೆಗಳು ಉಂಟಾಗಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.

ತುಲಾ: ಸಾಮಾಜಿಕವಾಗಿ ನಿಮ್ಮ ಕೀರ್ತಿಗೆ ಧಕ್ಕೆಯಾಗದು. ಆದರೆ ಅನಗತ್ಯ ವಿಚಾರದಲ್ಲಿ ಮೂಗು ತೂರಿಸಲು ಹೋದರೆ ಅಪಮಾನ ಖಂಡಿತಾ. ಮಹಿಳೆಯರಿಗೆ ಉದ್ಯೋಗದಲ್ಲಿ ಕೊಂಚ ಬಿಡುವು ಸಿಗಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ವೃಶ್ಚಿಕ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ವೈವಾಹಿಕ ಪ್ರಸ್ತಾಪಗಳು ಬಂದರೂ ಸ್ವಲ್ಪದರಲ್ಲೇ ತಪ್ಪಿ ಹೋದ ನಿರಾಶೆ ಕಾಡಲಿದೆ. ಸಾಹಿತ್ಯ, ಕಲಾ ಕ್ಷೇತ್ರದಲ್ಲಿರುವವರು ಕೀರ್ತಿ ಸಂಪಾದನೆ ಮಾಡಲಿದ್ದೀರಿ.

ಧನು: ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ಹಿರಿಯರಿಗೆ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದೆ. ನ್ಯಾಯಾಲಯದ ಕಲಾಪಗಳು ಸುಗಮವಾಗಿ ನೆರವೇರಲಿದೆ. ದಾಯಾದಿ ಕಲಹಗಳು ಹಿರಿಯರ ಮಧ್ಯಸ್ಥಿಕೆಯಿಂದ ಅಂತ್ಯವಾಗಲಿದೆ.

ಮಕರ: ಸೋಲಿನಲ್ಲಿಯೂ ಗೆಲುವನ್ನು ಕಾಣುವ ನಿಮ್ಮ ಗುಣ ನಿಮಗೆ ವರವಾಗಲಿದೆ. ಆತ್ಮಸ್ಥೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆದರೆ ಯಶಸ್ಸು ಸಾಧ‍್ಯ. ಹಣಕಾಸಿನ ಅಭಾವ ತೋರಿಬಂದೀತು. ಸಂಗಾತಿಯ ಸಹಕಾರ ಸಿಗಲಿದೆ.

ಕುಂಭ: ನೂತನ ದಂಪತಿಗಳಿಗೆ ಸಂತಾನಫಲ ಸೂಚನೆ ಸಿಗಲಿದೆ. ಹೆಣ್ಣು ಮಕ್ಕಳಿಗೆ ತವರಿನಿಂದ ಉಡುಗೊರೆ ಸಿಗುವುದು. ಹಿರಿಯರ ಮಾತಿಗೆ ಬೆಲೆಕೊಡುವುದು ಸೂಕ್ತ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಅಸಡ್ಡೆ ಬೇಡ.

ಮೀನ: ನೂತನ ಕೆಲಸಗಳಿಗೆ, ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಕ್ತ ದಿನ. ಸರಕಾರಿ ಅಧಿಕಾರಿಗಳಿಗೆ ಕಾರ್ಯದೊತ್ತಡ ಅಧಿಕವಿರಲಿದೆ. ಅನವಶ್ಯಕ ಮಾತಿನಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯವುಂಟಾಗಬಹುದು. ತಾ‍ಳ್ಮೆ, ಸಂಯಮ ಅಗತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ