ಮೇಷ: ದೇವತಾ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಹೊಸ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ಆದರೆ ಅನೇಕ ಜವಾಬ್ಧಾರಿಗಳನ್ನು ಏಕಕಾಲಕ್ಕೆ ಹೆಗಲ ಮೇಲೆ ಹೊತ್ತುಕೊಂಡು ಗೊಂದಲಕ್ಕೊಳಗಾಗಬೇಡಿ. ತಾಳ್ಮೆ, ಸಂಯಮದಿಂದ ಮುಂದುವರಿಯಿರಿ.
ವೃಷಭ: ದೈವಾನುಗ್ರಹವಿಲ್ಲದೇ ಯಾವುದೇ ಕೆಲಸವೂ ಮುಂದುವರಿಯದು. ಯಾವುದೇ ಹೊಸ ಯೋಜನೆಗೆ ಕೈ ಹಾಕುವ ಮುನ್ನ ಕುಲದೇವರ ಪ್ರಾರ್ಥನೆ ಮಾಡಿ. ನಿರುದ್ಯೋಗಿಗಳು ಉದ್ಯೋಗ ಭಾಗ್ಯ ಹೊಂದಲಿದ್ದಾರೆ. ಸರಕಾರಿ ಕೆಲಸದವರಿಗೆ ಕಾರ್ಯದೊತ್ತಡವಿರಲಿದೆ.
ಮಿಥುನ: ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಾಮಾಜಿಕ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮುಂಗೋಪವೇ ನಿಮಗೆ ಶತ್ರುವಾದೀತು. ಅನ್ಯರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
ಕರ್ಕಟಕ: ಅಪಘಾತದ ಭಯ ಕಾಡಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ರಾಜಕೀಯ ರಂಗದವರಿಗೆ ಕಾರ್ಯದೊತ್ತಡವಿರಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗೆ ಸಿದ್ಧರಾಗಿ.
ಸಿಂಹ: ಗೃಹೋಪಯೋಗಿ ವಸ್ತುಗಳಿಗೆ ಅಧಿಕ ಖರ್ಚು ವೆಚ್ಚ ಮಾಡಲಿದ್ದೀರಿ. ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡೀತು. ದೇವತಾ ಪ್ರಾರ್ಥನೆ ಮರೆಯದಿರಿ.
ಕನ್ಯಾ: ಧನ ಗಳಿಕೆಗೆ ಬೇರೆ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟವಾಗಬಹುದು. ಸಂಗಾತಿಯೊಂದಿಗೆ ನಿಮ್ಮ ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲಿದ್ದೀರಿ. ಕೆಟ್ಟ ಸ್ನೇಹ ಸಂಗದಿಂದ ದೂರವಿರುವುದೇ ಉತ್ತಮ.
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿದ ನಿಗದಿತ ಸಮಯಕ್ಕೆ ಕೆಲಸ ಪೂರ್ತಿ ಮಾಡಲಿದ್ದು, ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ. ಸತ್ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.
ವೃಶ್ಚಿಕ: ನೂತನ ಗೃಹ ನಿರ್ಮಾಣ ಅಥವಾ ಕಟ್ಟಡ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಬಹುದು. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರೊಂದಿಗೆ ಪ್ರವಾಸ ಯೋಗವಿದೆ.
ಧನು: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಪ್ರಗತಿ ಕಂಡುಬರಲಿದೆ. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಕರ: ಮುಚ್ಚುಮರೆಯಿಲ್ಲದೆಯೇ ನಿಮ್ಮ ಮನಸ್ಸಿನ ಮಾತನ್ನು ಸಂಗಾತಿಯ ಜತೆ ಹಂಚಿಕೊಳ್ಳುವುದರಿಂದ ಮುಂದೆ ತೊಂದರೆಯಾಗದು. ಕೌಟುಂಬಿಕವಾಗಿ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ಹಿತಶತ್ರುಗಳ ಸಂಚು ಬಯಲಿಗೆ ಬರಲಿದೆ.
ಕುಂಭ: ನಿಮ್ಮ ಆತ್ಮೀಯರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ. ಕಲೆ, ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ. ವಿದ್ಯಾರ್ಥಿಗಳಿಗೆ ಆಲಸ್ಯತನವೇ ಶತ್ರುವಾಗಲಿದೆ. ಹಳೆಯ ಹರಕೆ ತೀರಿಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಕಾದಿದೆ.
ಮೀನ: ನಿರ್ಧಾರಗಳನ್ನು ಕೈಗೊಳ್ಳುವಾಗ ಗೊಂದಲ ಕಾಡಬಹುದು. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಸಾಮಾಜಿಕ ರಂಗದಲ್ಲಿ ಪ್ರಶಂಸೆಗೊಳಗಾಗುವಿರಿ. ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ.