ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 28 ನವೆಂಬರ್ 2020 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಇಷ್ಟು ದಿನ ಕಾಡುತ್ತಿದ್ದ ಸಮಸ್ಯೆಗಳಿಗೆ ನಿಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ಯೋಗ್ಯ ವ್ಯಕ್ತಿಗಳ ಜತೆ ವ್ಯವಹಾರ ಮಾಡಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ನಿಮ್ಮ ಮಾತು, ವರ್ತನೆ ಹಿತಮಿತವಾಗಿದ್ದರೆ ಉತ್ತಮ. ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟು ಮಾಡಬೇಡಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಬಹಳ ದಿನಗಳ ನಂತರ ದೂರ ಪ್ರಯಾಣ ಮಾಡಲಿದ್ದೀರಿ.

ಮಿಥುನ: ಅನಿವಾರ್ಯವಾಗಿ ದೂರ ಪ್ರಯಾಣವನ್ನು ಅರ್ಧಕ್ಕೇ ಸ್ಥಗಿತಗೊಳಿಸುವಿರಿ. ವಾಹನ ಚಾಲಕರು ಚಾಲನೆಯಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಎಷ್ಟೋ ದಿನದಿಂದ ಕಾಡುತ್ತಿದ್ದ ಚಿಂತೆಗಳಿಗೆ ಪರಿಹಾರ ಕಂಡುಕೊಳ‍್ಳಲು ಯತ್ನಿಸುವಿರಿ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲಧಿಕಾರಿಗಳಿಗೆ ಸಂತೋಷವುಂಟು ಮಾಡುವ ಕೆಲಸ ಮಾಡಲಿದ್ದೀರಿ. ಕೆಳಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.

ಸಿಂಹ: ಉದ್ಯೋಗ ರಂಗದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಕೈಹಿಡಿದ ಕೆಲಸಗಳು ಯಶಸ್ವಿಯಾಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಏಳಿಗೆ ಕಂಡುಬರಲಿದೆ. ಚಿಂತೆ ಬೇಡ.

ಕನ್ಯಾ: ಬೇರೆಯವರ ಸಲಹೆಯಂತೆ ನಿರ್ಧಾರ ಕೈಗೊಳ್ಳಲು ಹೋದರೆ ಕೈಸುಟ್ಟುಕೊಳ್ಳುವ ಸಂಭವವೇ ಹೆಚ್ಚು. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ. ಮನಸ್ಸಿಗೆ ಇಷ್ಟವಾದ ವ್ಯಕ್ತಿಗಳೊಂದಿಗೆ ಸುಮಧುರ ಕ್ಷಣ ಕಳೆಯಲಿದ್ದೀರಿ.

ತುಲಾ: ಇಷ್ಟವಸ್ತುಗಳ ಖರೀದಿ, ಭೋಜನ ಯೋಗವಿದೆ. ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಸುಧಾರಣೆಯಾದೀತು. ನೂತನ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲು ಇದು ಸರಿಯಾದ ಸಮಯ. ದೇವತಾ ಪ್ರಾರ್ಥನೆ ಮರೆಯದಿರಿ.

ವೃಶ್ಚಿಕ: ಬೇರೆಯವರು ಏನಂದುಕೊಳ್ಳುವರೋ ಎಂಬ ಹಿಂಜರಿಕೆಯಲ್ಲಿ ನಿಮ್ಮ ನಿರ್ಧಾರಗಳನ್ನು ಹೊರ ಹಾಕಲು ಹಿಂದೇಟು ಹಾಕುವಿರಿ. ನಿಮ್ಮ ಕಷ್ಟಗಳಿಗೆ ಸಂಗಾತಿಯ ಸಾಂತ್ವನ ಸಿಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ದೊರೆಯಲಿವೆ.

ಧನು: ಮನಸ್ಸಿಗೆ ಇಷ್ಟವಾದವರ ಜತೆ ನಿಮ್ಮ ಮನದಾಳ ಹಂಚಿಕೊಳ್ಳಲಿದ್ದೀರಿ. ಪ್ರೀತಿ ಪಾತ್ರರು ನಿಮ್ಮ ಕಷ್ಟಕ್ಕೆ ಜತೆಯಾಗಲಿದ್ದಾರೆ. ಕೌಟುಂಬಿಕವಾಗಿ ಅನಿರೀಕ್ಷಿತ ಅತಿಥಿಗಳ ಆಗಮನವಾದೀತು. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮಕರ: ಇಷ್ಟು ದಿನ ವಿಘ‍್ನಗಳಿಂದಾಗಿ ಅರ್ಧಕ್ಕೇ ನಿಂತ ಕೆಲಸಗಳಿಗೆ ಇಂದು ಚಾಲನೆ ನೀಡಲಿದ್ದೀರಿ. ನಿಮ್ಮ ವಿಶ್ವಾಸದ ವಂಚನೆ ಮಾಡುವವರಿರುತ್ತಾರೆ. ಎಚ್ಚರಿಕೆಯಿಂದಿರಿ. ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಬೇರೆಯವರಿಗೆ ಒಳಿತನ್ನೇ ಬಯಸುವ ನಿಮ್ಮ ಗುಣ ನಿಮಗೆ ಒಳ್ಳೆಯದನ್ನೇ ಮಾಡಲಿದೆ. ವ್ಯಾವಹಾರಿಕವಾಗಿ ಮುನ್ನಡೆ ಕಂಡುಬರಲಿದೆ. ಕೃಷಿಕರಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.

ಮೀನ: ಇಷ್ಟು ದಿನ ಕಳೆದುಕೊಂಡಿದ್ದ ನೆಮ್ಮದಿ, ಪ್ರೀತಿ ಕ್ರಮೇಣ ನಿಮ್ಮ ಪಾಲಿಗೆ ಬಂದೊರಗಲಿದೆ. ಆರ್ಥಿಕವಾಗಿ ಆದಾಯ ವೃದ್ಧಿಯಾಗಲಿದೆ. ಬಹಳ ದಿನಗಳ ನಂತರ ಬಂಧು ವರ್ಗದವರ ಭೇಟಿಯಾಗಿ ಮನಸ್ಸಿಗೆ ಸಂತಸವಾಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ