ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಗೆ ತಕ್ಕ ಬೆಲೆ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು.
ವೃಷಭ: ಮಹಿಳೆಯರಿಗೆ ಕೆಲಸ ಕಾರ್ಯಗಳಲ್ಲಿ ಸಣ್ಣ ಪುಟ್ಟ ತೊಂದರೆಗಳು ಕಂಡುಬಂದೀತು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ. ಕಿರು ಸಂಚಾರ ಮಾಡಲಿದ್ದೀರಿ.
ಮಿಥುನ: ವೃತ್ತಿರಂಗದಲ್ಲಿ ನೀವು ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಉದಾಸೀನ ಬೇಡ. ಹಿರಿಯರಿಗೆ ಪುಣ್ಯ ಕ್ಷೇತ್ರಗಳಿಗೆ ಸಂದರ್ಶನ ಮಾಡುವ ಯೋಗವಿದೆ.
ಕರ್ಕಟಕ: ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಎಷ್ಟೋ ದಿನಗಳಿಂದ ಬಾಕಿಯಿದ್ದ ಕೆಲಸಗಳಿಗೆ ಚಾಲನೆ ನೀಡುವಿರಿ. ಬ್ಯಾಂಕ್ ವ್ಯವಹಾರಗಳನ್ನು ಇಂದೇ ಪೂರ್ತಿ ಮಾಡಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಸಿಂಹ: ವ್ಯವಹಾರದ ಆರಂಭದಲ್ಲಿ ವಿಘ್ನಗಳಿದ್ದರೂ ನಿಮ್ಮ ಸತತ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿರೀಕ್ಷಿತ ಅಭಿವೃದ್ಧಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕೂಡಿಬರಲಿವೆ. ಬಳಸಿಕೊಳ್ಳಿ.
ಕನ್ಯಾ: ಸಾಂಸಾರಿಕವಾಗಿ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಹಾತೊರೆಯಲಿದ್ದೀರಿ. ಹಿರಿಯರು ದೈವ ಕಾರ್ಯಗಳನ್ನು ಪೂರ್ತಿ ಮಾಡಲಿದ್ದಾರೆ. ತಾಳ್ಮೆಯಿರಲಿ.
ತುಲಾ: ಆಸ್ತಿ ಖರೀದಿ ವಿಚಾರವಾಗಿ ಹಿರಿಯರೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ತಂದೆ-ತಾಯಿಯರ ಅಭಿಪ್ರಾಯಕ್ಕೆ ಬೆಲೆ ಕೊಡಿ. ಹೊಸದಾಗಿ ಖರೀದಿಸಿದ ವಸ್ತು ಕಳೆದುಕೊಳ್ಳುವ ಅಪಾಯವಿದೆ. ಎಚ್ಚರಿಕೆಯಿರಲಿ.
ವೃಶ್ಚಿಕ: ನಿರುದ್ಯೋಗಿಗಳು ಅವಕಾಶ ಬಂದಾಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಮುಖ್ಯ. ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆ ಕಂಡುಬರಬಹುದು. ಮಾತಿನ ಮೇಲೆ ನಿಗಾ ಇರಲಿ. ದೇವತಾ ಪ್ರಾರ್ಥನೆ ಮಾಡಿ.
ಧನು: ನೀವು ಅತಿಯಾಗಿ ವ್ಯಾಮೋಹವಿಟ್ಟುಕೊಂಡಿದ್ದ ವಸ್ತು ತಾನಾಗೇ ಕೈ ಸೇರುವ ಗಳಿಗೆ ಎದುರಾಗಲಿದೆ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ನಿಮ್ಮ ಕೆಲಸಗಳಿಗೆ ಅನ್ಯರನ್ನು ಅವಲಂಬಿಸದೇ ಪರಿಶ್ರಮದಿಂದ ಜಯಗಳಿಸಲಿದ್ದೀರಿ.
ಮಕರ: ಕೌಟುಂಬಿಕವಾಗಿ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧರಾಗಿ. ಸಾಂಸಾರಿಕವಾಗಿ ಸಂತೋಷವಿರಲಿದೆ. ಆದರೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳು ಎದುರಾದೀತು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ: ನಿಮಗನಿಸಿದ್ದನ್ನು ವಸ್ತು ನಿಷ್ಟವಾಗಿ ಹೇಳಿ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಪಡೆಯಲು ಹರಸಾಹಸ ಪಡಬೇಕಾದೀತು. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದಿನದಂತ್ಯಕ್ಕೆ ನೆಮ್ಮದಿ.
ಮೀನ: ಹೊಸ ವಸ್ತು, ವಸ್ತ್ರ ಖರೀದಿ ಯೋಗವಿದೆ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಕ್ಕೀತು. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಮಾನ ವೃದ್ಧಿಯಾಗಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.