ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 4 ಆಗಸ್ಟ್ 2022 (07:35 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮಗನಿಸಿದ್ದನ್ನು ಮಾಡುವ ನಿಮ್ಮ ಗುಣದಿಂದ ಇತರರ ನಿಷ್ಠುರಕ್ಕೆ ಕಾರಣವಾಗಲಿದ್ದೀರಿ. ಸಂಗಾತಿಯೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಬೇಕು. ಆರ್ಥಿಕವಾಗಿ ಧನಾರ್ಜನೆಗೆ ನಾನಾ ಅವಕಾಶಗಳು ಕಂಡುಬರಲಿದೆ.

ವೃಷಭ: ವೈವಾಹಿಕ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ. ನೂತನ ಮಿತ್ರರ ಸಮಾಗಮವಾಗಲಿದೆ. ಆರ್ಥಿಕವಾಗಿ ಏರಿಳಿತಗಳು ಕಂಡುಬಂದರೂ ಸ್ನೇಹಿತರ ಸಹಾಯ ಸಿಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ: ನೀವು ಕೈಗೊಳ್ಳುವ ಕೆಲಸಗಳು ಇತರರ ಅಸಮಾಧಾನಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸಬೇಕು. ಕೌಟುಂಬಿಕವಾಗಿ ಇತರರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಕರ್ಕಟಕ: ಮುಂದಿನ ಭವಿಷ್ಯಕ್ಕೆ ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಉತ್ತಮ. ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯಲು ಅವಕಾಶಗಳು ಸಿಗಲಿವೆ. ಕೃಷಿಕರಿಗೆ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ.  ಆರೋಗ್ಯದಲ್ಲಿ ಸುಧಾರಣೆ.

ಸಿಂಹ: ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಯೋಗ ನಿಮ್ಮದಾಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಅಪವಾದದ ಭೀತಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ಮಹಿಳೆಯರಿಗೆ ಮಂಗಲ ವಸ್ತ್ರ ಖರೀದಿ ಯೋಗ. ಕೌಟುಂಬಿಕವಾಗಿ ನೆಮ್ಮದಿ, ಸಂತೋಷ ಕಂಡುಬರಲಿದೆ. ನೆಂಟರಿಷ್ಟರ ಆಗಮನ ಸಾಧ‍್ಯತೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಂದ ಶ್ರೇಯಸ್ಸು.

ತುಲಾ: ಆಹಾರೋತ್ಪನ್ನ ಉದ್ಯಮಿಗಳಿಗೆ ಏಳಿಗೆಯ ಅವಕಾಶಗಳು ಬರಲಿವೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ಪ್ರೇಮಿಗಳಿಗೆ ಶುಭ ದಿನ.

ವೃಶ್ಚಿಕ: ಉದ್ಯೋಗ ರಂಗದಲ್ಲಿ ಉನ್ನತ ಕಾರ್ಯಸಾಧನೆಗೆ ಪ್ರಯತ್ನ ಪಡಲಿದ್ದೀರಿ. ಕ್ರಿಯಾತ್ಮಕ ಕೆಲಸಗಳು ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೊಗ ಸಂದರ್ಶನಕ್ಕೆ ಕರೆಬರುವುದು. ಚಿಂತೆ ಬೇಡ.

ಧನು: ಹಿರಿಯರಿಗೆ ತೀರ್ಥ ಯಾತ್ರೆ ಕೈಗೊಳ್ಳುವ ಯೋಗ. ಧಾರ್ಮಿಕ ಕಾರ್ಯಗಳಿಗೆ ಧನ ವಿನಿಯೋಗವಾಗಲಿದೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ನೆರೆ ಹೊರೆಯವರು ಕಷ್ಟಕ್ಕೆ ಆಗಿಬರಲಿದ್ದಾರೆ.

ಮಕರ: ನಿಮ್ಮ ಗುರುಹಿರಿಯರು ಹಿಂದೆ ಮಾಡಿದ್ದ ಒಳ್ಳೆಯ ಕೆಲಸಗಳು ಇಂದು ನಿಮಗೆ ಅನುಕೂಲವಾಗಲಿದೆ. ಮಹಿಳೆಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವ. ದಾಂಪತ್ಯದಲ್ಲಿ ಸುಖ ಸಮೃದ್ಧಿ ಕಂಡುಬರಲಿದೆ. ಚಿಂತೆ ಬೇಡ.

ಕುಂಭ: ಕೌಟುಂಬಿಕವಾಗಿ ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸುಖ ಸಂತೋಷವಿರಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಕ್ರಯ ವಿಕ್ರಯ ವ್ಯವಹಾರದಲ್ಲಿ ಲಾಭವಾಗಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಮೀನ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆ ಈಗ ನಿವಾರಣೆಯಾಗಲಿದೆ. ಸನ್ಮಿತ್ರರ ಸಹಕಾರ ಕಂಡುಬರಲಿದೆ. ಆತುರದ ನಿರ್ಧಾರಕ್ಕೆ ಕೈ ಹಾಕಬೇಡಿ. ಹಣಕಾಸಿನ ವಿಚಾರದಲ್ಲಿ ಅನಗತ್ಯ ದಾಕ್ಷಿಣ್ಯಕ್ಕೆ ಒಳಗಾಗಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ