ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 29 ಡಿಸೆಂಬರ್ 2022 (08:38 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಇಷ್ಟು ದಿನವಿದ್ದ ಮನಸ್ತಾಪ ಮರೆತು ಒಂದಾಗುವ ಮನಸ್ಸು ಮಾಡಲಿದ್ದೀರಿ. ಭವಿಷ್ಯದ ಬಗ್ಗೆ ಆತಂಕವಾದೀತು. ಆಪ್ತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲಿದ್ದೀರಿ. ಕಾರ್ಯರಂಗದಲ್ಲಿ ಮುನ್ನಡೆ ಕಂಡುಬರಲಿದೆ.

ವೃಷಭ: ಬಹುನಿರೀಕ್ಷಿತ ವ್ಯಕ್ತಿಗಳನ್ನು ಭೇಟಿಯಾಗುವ ಯೋಗ. ನಿಮ್ಮ ಮನಸ್ಸಿನ ಇಚ್ಛೆಯಂತೇ ಎಲ್ಲವೂ ನಡೆಯಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ದೇವತಾ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಮಿಥುನ: ಉದ್ದೇಶಿತ ಕೆಲಸಗಳಿಗೆ ಅಡೆತಡೆ ಉಂಟಾದೀತು. ಯೋಗ್ಯ ವಯಸ್ಕರು ಉತ್ತಮ ವೈವಾಹಿಕ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಉತ್ತಮ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ ಕಂಡುಬರಲಿದೆ.

ಕರ್ಕಟಕ: ವ್ಯಾಪಾರಿಗಳು ವ್ಯವಹಾರ ನಿಮಿತ್ತ ಪರವೂರಿಗೆ ಸಂಚರಿಸಬೇಕಾದೀತು. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ನೆರೆಹೊರೆಯವರ ಜೊತೆ ಅನಗತ್ಯ ಸಂಘರ್ಷ ಬೇಡ.

ಸಿಂಹ: ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಅವಿವಾಹಿತರಿಗೆ ನೆಂಟಸ್ತಿಕೆ ಒದಗಿಬರಲಿದೆ. ಕೌಟುಂಬಿಕವಾಗಿ ಅನಿರೀಕ್ಷಿತ ಅತಿಥಿಗಳ ಆಗಮನಕ್ಕೆ ಸಿದ್ಧರಾಗಿ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಕನ್ಯಾ: ನಿಮ್ಮಲ್ಲಿರುವ ತಪ್ಪುಗಳಿಗೆ ಬೇರೆಯವರನ್ನು ಹೊಣೆ ಮಾಡುವ ಪ್ರವೃತ್ತಿ ಕಂಡುಬರಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ನಡೆಸಲಿದ್ದೀರಿ. ಅನಿರೀಕ್ಷಿತ ಧನ ಲಾಭವಾಗಲಿದೆ. ಸರಕಾರೀ ಕೆಲಸಗಳಲ್ಲಿ ಜಯ ಸಿಗುವುದು.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಉತ್ತರದಾಯಿತ್ವಕ್ಕೆ ಸಿದ್ಧರಾಗಬೇಕಾಗುತ್ತದೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಂಡುಬರುವುದು.

ವೃಶ್ಚಿಕ: ನಿಮ್ಮ ಕ್ರಿಯಾತ್ಮಕ ಕೆಲಸಗಳಿಗೆ ಇತರರ ಮೆಚ್ಚುಗೆ ಸಿಗಲಿದೆ. ವ್ಯಾವಹಾರಿಕವಾಗಿ ನಿಮ್ಮ ಜಯ ಯಾರಿಂದಲೂ ತಡೆಯಲಾಗದು. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಅನಗತ್ಯ ಮಾತು ಬೇಡ.

ಧನು: ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯಕ್ಕೆ ಪೂರಕವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಕೆಲಸ ಕಾರ್ಯಗಳ ಬಗ್ಗೆ ಇತರರಿಂದ ಶ್ಲಾಘನೆ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಪಾಲುದಾರಿಕೆ ವ್ಯವಹಾರಗಳು ಅತ್ಯಂತ ತ್ರಾಸದಾಯಕ ಎನಿಸಬಹುದು. ಮಾತೃ ಸಮಾನರಿಂದ ನಿಮ್ಮ ಕೆಲಸಗಳಿಗೆ ಸಹಾಯವಾಗಲಿದೆ.  ಸಾಂಸಾರಿಕ ಸುಖಕ್ಕೆ ಅಡ್ಡಿ ಎದುರಾದೀತು. ಕಿರು ಓಡಾಟ ನಡೆಸಬೇಕಾಗುತ್ತದೆ.

ಕುಂಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಮಾನ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ವಿಫುಲ ಅವಕಾಶ ಸಿಗುವುದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ದುಂದು ವೆಚ್ಚ ಬೇಡ.

ಮೀನ: ದೇವತಾ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ ಸಿಗಲಿದೆ. ದೂರ ಪ್ರಯಾಣ ಸಂಭವ. ಆಸ್ತಿ ವಿಚಾರದಲ್ಲಿ ಸಂಘರ್ಷಗಳು ಬಗೆಹರಿಯಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ. ಆರೋಗ್ಯದ ಬಗ್ಗೆ ಗಮನಹರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ