ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 25 ಮಾರ್ಚ್ 2023 (08:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಲಿದೆ. ದೂರ ಪ್ರಯಾಣ ಮಾಡಲಿದ್ದೀರಿ. ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ವೃಷಭ: ಕೆಲಸದ ವಿಚಾರಕ್ಕೆ ಅನ್ಯರ ಸಹಾಯ ಪಡೆಯಬೇಕಾಗುತ್ತದೆ. ರಾಜಕೀಯ ರಂಗದಲ್ಲಿರುವವರಿಗೆ ಅಧಿಕಾರಕ್ಕಾಗಿ ಸತತ ಪ್ರಯತ್ನ ಪಡಬೇಕಾಗುತ್ತದೆ. ಭೂಮಿ, ಪಾಲುದಾರಿಕಾ ವ್ಯವಹಾರದಲ್ಲಿ ಲಾಭವಿರಲಿದೆ.

ಮಿಥುನ: ಪ್ರಯಾಣ ಮಾಡುವಾಗ ಅನಿರೀಕ್ಷಿತವಾಗಿ ಆತ್ಮೀಯರ ಭೇಟಿಯಾಗುವ ಸಾಧ‍್ಯತೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಚ್ಚರ.

ಕರ್ಕಟಕ: ಹೊಸದಾಗಿ ಉದ್ಯೋಗ ಬದಲಾವಣೆ ಮಾಡಿಕೊಂಡವರಿಗೆ ಅಡೆತಡೆಗಳು ಕಂಡುಬಂದೀತು. ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.

ಸಿಂಹ: ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಆದಾಯ ವರ್ಧನೆಗೆ ಮೂಲಗಳು ಕಂಡುಬಂದೀತು. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಅನಗತ್ಯ ಚಿಂತೆ ಬೇಡ.

ಕನ್ಯಾ: ಉದ್ಯೋಗ, ವ್ಯವಹಾರದಲ್ಲಿ ಪಾಲುದಾರಿಕೆಗೆ ಅವಕಾಶವಿರಲಿದೆ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾದೀತು.

ತುಲಾ: ಕಾರ್ಯರಂಗದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆಪ್ತರಿಂದ ನೆರವು ಪಡೆಯಲಿದ್ದೀರಿ. ಹಿಂದೆ ಮಾಡಿದ್ದ ಸಾಲ ಮರುಪಾವತಿ ಮಾಡಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಕಾರ್ಯದೊತ್ತಡ ಕಂಡುಬರಲಿದೆ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ.

ಧನು: ಸಾಮಾಜಿಕ ವಿಚಾರದಲ್ಲಿ ನಿರೀಕ್ಷಿತ ಫಲಿತಾಂಶ ಕಂಡುಬರಲಿದೆ. ಹೊಸದಾಗಿ ಪರಿಚಿತರಾದವರಿಂದ ನಿಮ್ಮ ವ್ಯವಹಾರಗಳಿಗೆ ನೆರವಾಗಲಿದೆ. ಮನೆಗೆ ಬಂಧು ಮಿತ್ರರ ಭೇಟಿ ಸಾಧ‍್ಯತೆ. ತಾಳ್ಮೆಯಿರಲಿ.

ಮಕರ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಕುಂಭ: ಮನಸ್ಸಿಲ್ಲದೇ ಹೋದರೂ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ಕಂಡುಬಂದೀತು. ಇಷ್ಟ ಮಿತ್ರರನ್ನು ಭೇಟಿಯಾಗುವ ಯೋಗ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ