ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 30 ಆಗಸ್ಟ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕಾರ್ಯ ವಿಳಂಬಗತಿಯಲ್ಲಿ ಸಾಗಿದರೂ ಯಶಸ್ಸು ನಿಮ್ಮದಾಗುವುದು. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗ.

ವೃಷಭ: ಬರಬೇಕಾದ ಬಾಕಿ ವಸೂಲಾತಿ ಬಗ್ಗೆ ಚಿಂತೆಯಾಗಲಿದೆ. ಗೃಹಿಣಿಯರಿಗೆ ಮನೆಯಲ್ಲಿ ತಮಗೆ ಮನ್ನಣೆ ಇಲ್ಲವೆಂಬ ಕೊರಗು ಕಾಡೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಮಿಥುನ: ಯೋಜನಾಬದ್ಧವಾಗಿ ಕೆಲಸ ಮಾಡುವುದರಿಂದ ಕಾರ್ಯಗಳು ಸುಸ್ರೂತ್ರವಾಗಿ ನಡೆಯಲಿದೆ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಕರ್ಕಟಕ: ಮಾತಿನಲ್ಲೇ ಇತರರಿಗೆ ಮೋಡಿ ಮಾಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಸಿಂಹ: ಉದ್ಯೋಗ, ವ್ಯವಹಾರದಲ್ಲಿ ಸಹೋದ್ಯೋಗಿಗಳ ಸಹಕಾರ ಕಂಡುಬರಲಿದೆ. ಸರಕಾರೀ ನೌಕರರಿಗೆ ಮುಂಬಡ್ತಿ ಯೋಗ. ಸಾಲಗಾರರ ಕಾಟದಿಂದ ಮುಕ್ತಿ. ವಾಹನ ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಕನ್ಯಾ: ಸೇವಾ ಮನೋಭಾವಾದವರಿಗೆ ಒಳಿತೇ ಆಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದಾನ ಧರ್ಮಾದಿಗಳು ಮನಸ್ಸಿಗೆ ಖುಷಿ ನೀಡಲಿವೆ. ಹಣಕಾಸಿನ ಹರಿವಿಗೆ ತೊಂದರೆಯಾಗದು.

ತುಲಾ: ದೂರದ ವ್ಯವಹಾರಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಂದ ಹೆಚ್ಚಿನ ಹೊಣೆಗಾರಿಕೆ ಸಿಗಲಿದೆ.

ವೃಶ್ಚಿಕ: ಭವಿಷ್ಯದ ಬಗ್ಗೆ ಕೆಲವು ಮಹತ್ವದ  ತೀರ್ಮಾನ ಕೈಗೊಳ್ಳುವ ಸಮಯ. ಮಕ್ಕಳು ಎದುರುತ್ತರ ನೀಡಿಯಾರು. ತಾಳ್ಮೆ, ಸಂಯಮ ಅಗತ್ಯ. ಸಾಹಿತ್ಯ, ಅಧ್ಯಯನಾಸಕ್ತರಿಗೆ ಉನ್ನತ ಅವಕಾಶಗಳು ಕಂಡುಬರಲಿದೆ.

ಧನು: ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೀರೋ ಇಲ್ಲವೋ ಎಂಬ ಸಂಶಯ ಕಾಡೀತು. ಬಂಧು ಮಿತ್ರರನ್ನು ಭೇಟಿ ಮಾಡಿದ ಸಂತೋಷ ನಿಮ್ಮದಾಗಲಿದೆ. ದೂರದ ವ್ಯವಹಾರಗಳಿಂದ ಲಾಭವಾಗಲಿದೆ.

ಮಕರ: ಹೊಸ ಕೆಲಸ ಹುಡುಕಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ಹಿನ್ನಡೆಯಾದೀತು. ಆಪ್ತರ ಸಲಹೆ ಪಾಲಿಸುವುದು ಉತ್ತಮ. ಮಕ್ಕಳಿಂದ ಉಡುಗೊರೆ ನಿರೀಕ್ಷಿಸಬಹುದು. ಮೇಲಧಿಕಾರಿಗಳಿಂದ ಪ್ರೋತ್ಸಾಹ ಕಂಡುಬರುವುದು.

ಕುಂಭ: ಕೃಷಿ, ಹೈನುಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಲಾಭ. ಮಕ್ಕಳ ವಿವಾಹದ ಬಗ್ಗೆ ಚಿಂತನೆ ನಡೆಸಲಿದ್ಧೀರಿ. ಸಾಂಸಾರಿಕವಾಗಿ ಸುಖ, ಸಮೃದ್ಧಿಯಿರಲಿದೆ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸುವಿರಿ.

ಮೀನ: ಭಗವಂತನ ಕೃಪೆಯಿಂದ ಬೆಟ್ಟದಂತೆ ಬಂದ ಕಷ್ಟ ಸುಲಭವಾಗಿ ನಿವಾರಣೆಯಾಗಲಿದೆ. ಸ್ನೇಹಿತರಿಂದ ಸಕಾಲದಲ್ಲಿ ಹಣಕಾಸಿನ ನೆರವು ಸಿಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ. ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ