ಶಿವನಿಗೆ ಮಾಡುವ ರುದ್ರಾಭಿಷೇಕದ ಹಿನ್ನಲೆ ಗೊತ್ತಾ?

ಗುರುವಾರ, 7 ಮಾರ್ಚ್ 2019 (09:06 IST)
ಬೆಂಗಳೂರು: ಶಿವ ದೇವಾಲಯಕ್ಕೆ ಹೋದರೆ ರುದ್ರಾಭಿಷೇಕ ಮಾಡುವುದು ನಮ್ಮ ಪದ್ಧತಿ. ಶಿವನಿಗೆ ಅತ್ಯಂತ ಪ್ರೀತ್ಯರ್ಥವಾಗಿ ರುದ್ರಾಭಿಷೇಕ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ?


ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವುಕ್ಕಿ ಬಂತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನ ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಸಾಮಾನ್ಯವಾಗಿ ಧ್ಯಾನದಿಂದ ಎಚ್ಚರಗೊಂಡರೆ ಶಿವ ಕೋಪಗೊಳ್ಳುತ್ತಾನೆ.

ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವ ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಹಾಲಾಹಲವನ್ನು ಕುಡಿದು ಮೂರ್ಛೆ ಹೋಗುತ್ತಾನೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭಿಷೇಕ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ