ಸೌರವ್ಯೂಹದಲ್ಲಿ, ಅಪೂರ್ವ ಪ್ರಕೃತಿಯ ವಿದ್ಯಮಾನ, ಆಗಸ್ಟ್ 16 ರಂದು ಸಂಜೆ 5 ಗಂಟೆ 35 ನಿಮಿಷಕ್ಕೆ ಚಂದ್ರನು ಮೀನರಾಶಿಗೆ ಪ್ರವೇಶಿಸುವುದರೊಂದಿಗೆ ಗ್ರಹಮಾಲಿಕಾ ಯೋಗ ಪ್ರಾರಂಭವಾಗುತ್ತದೆ. ಎಂಟು ಗ್ರಹಗಳು ಅನುಕ್ರಮವಾಗಿ ಮೀನ ರಾಶಿಯಿಂದ ಕನ್ಯಾ ರಾಶಿಯವರೆಗೆ ಸಾಲಾಗಿಬರುತ್ತವೆ. ಈ ವಿದ್ಯಮಾನಕ್ಕೆ ಗ್ರಹಮಾಲಿಕಾ ಯೋಗವೆಂದು ಕರೆಯಲಾಗುತ್ತದೆ.
ಮೀನರಾಶಿಯಲ್ಲಿ ಚಂದ್ರ, ಮೇಷ ರಾಶಿಯಲ್ಲಿ ಗುರು, ವೃಷಭ ರಾಶಿಯಲ್ಲಿ ಕೇತು, ಮಿಥುನ ರಾಶಿಯಲ್ಲಿ ಕುಜ ಕಟಕ ರಾಶಿಯಲ್ಲಿ ರವಿ ಮತ್ತು ಶುಕ್ರ, ಸಿಂಹ ರಾಶಿಯಲ್ಲಿ ವಕ್ರೀ ಬುಧ, ಕನ್ಯಾರಾಶಿಯಲ್ಲಿ ಶನಿ ಹೀಗೆ 7 ರಾಶಿಯಲ್ಲಿ 8 ಗ್ರಹಗಳು ಅನುಕ್ರಮವಾಗಿ ಬರುತ್ತದೆ.
ಈ ಗ್ರಹ ಮಾಲಿಕಾಯೋಗ ಆಗಸ್ಟ್ 16ರ ಮಧ್ಯರಾತ್ರಿ 12 ಗಂಟೆ 36 ನಿಮಿಷದವರೆಗೆ ಇರುತ್ತದೆ. ವಕ್ರೀ ಬುಧನು ಸಿಂಹ ರಾಶಿಯಿಂದ ಪುನಃ ಕಟಕ ರಾಶಿಗೆ ಹೋಗುತ್ತಾನೆ. ಇಲ್ಲಿಗೆ ಗ್ರಹಮಾಲಿಕಾ ಯೋಗ ಮುಗಿಯುತ್ತದೆ. ನಂತರ ಆಗಸ್ಟ್ 17ರ ಬೆಳಗಿನ ಜಾವ 7 ಗಂಟೆ 45 ನಿಮಿಷಕ್ಕೆ ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ಪುನಃ ಗ್ರಹಮಾಲಿಕಾ ಯೋಗ ಉಂಟಾಗುತ್ತದೆ. ಈ ಯೋಗವು ಆಗಸ್ಟ್ 19ರ ಬೆಳಗಿನ ಜಾವ 5 ಗಂಟೆ 59 ನಿಮಿಷದವರೆಗೆ ಇರುತ್ತದೆ. ಚಂದ್ರನು ಮೇಷ ರಾಶಿಗೆ ಪ್ರವೇಶಿಸುವುದರೊಂದಿಗೆ ಗ್ರಹಮಾಲಿಕಾ ಯೋಗ ಮುಕ್ತಾಯವಾಗುತ್ತದೆ. ಗ್ರಹಮಾಲಿಕಾ ಯೋಗದ ಅವಧಿಯಲ್ಲಿ ಜನಿಸುವವರಿಗೆ ವಿವಿಧ 12 ವಿಶೇಷ ಗ್ರಹಮಾಲಿಕಾ ಯೋಗ ಉಂಟಾಗುತ್ತದೆ.
ಲಗ್ನದಿಂದ, ಗ್ರಹಗಳು ಅನುಕ್ರಮವಾಗಿ ರಾಶಿಗಳಲ್ಲಿ ಸಾಲಾಗಿಬಂದರೆ ಲಗ್ನಮಾಲಿಕಾ ಯೋಗ. ಈ ಯೋಗದವರು ಪ್ರಖ್ಯಾತ ವ್ಯಕ್ತಿಯಾಗಿದ್ದು, ಅನೇಕ ವಾಹನಗಳನ್ನು ಹೊಂದಿರುವವರಾಗಿರುತ್ತಾರೆ.
2ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾಯೋಗವು ವಿತ್ತಮಾಲಿಕಾ ಯೋಗ. ಈ ಯೋಗದವರು ಐಶ್ವರ್ಯವಂತ, ಪಿತೃಭಕ್ತಿಯುತ, ಧೈರ್ಯ, ಸಿಟ್ಟು, ರೂಪವಂತ, ರಾಜಯೋಗ ಅನುಭವಿಸುವವರಾಗಿರುತ್ತಾರೆ.
3ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ವಿಕ್ರಮ ಮಾಲಿಕಾ ಯೋಗ. ಈ ಯೋಗದವರು ಧೈರ್ಯ, ಸಾಹಸ, ಧನಿಕ ಆದರೆ ಅನಾರೋಗ್ಯ ಉಂಟಾಗಿರುತ್ತದೆ.
4ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಸುಖ ಮಾಲಿಕಾ ಯೋಗ. ಈ ಯೋಗದವರು ಪ್ರಸಿದ್ಧ ವ್ಯಕ್ತಿ, ಮುಖ್ಯಾಧಿಕಾರಿ, ಮಹಾದಾನಿ, ವಿದೇಶ ಪ್ರವಾಸ ಹಾಗೂ ವ್ಯವಹಾರ ಮಾಡುವವರಾಗುತ್ತಾರೆ.
5ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಸುತಮಾಲಿಕಾ ಯೋಗ. ಈ ಯೋಗದವರು ಧಾರ್ಮಿಕ ಶ್ರದ್ದೆ, ಒಳ್ಳೆಯ ಕೆಲಸಗಳನ್ನು ಮಾಡುವವನು, ಅನೇಕ ಪ್ರಶಸ್ತಿಗಳನ್ನು ಪಡೆಯುವವರಾಗಿರುತ್ತಾರೆ.
6ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ರಿಪು ಮಾಲಿಕಾ ಯೋಗ. ಈ ವರ್ಗದವರು ಸುಖ-ದುಃಖಗಳನ್ನು ಸಮಾನವಾಗಿ ಅನುಭವಿಸುವವರಾಗಿರುತ್ತಾರೆ.
8ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ರಂಧ್ರಮಾಲಿಕಾ ಯೋಗ. ಈ ಯೋಗದವರು ದೀರ್ಘಾಯು, ಧನಹೀನ, ಪ್ರಮುಖ ವ್ಯಕ್ತಿಯಾಗುತ್ತಾರೆ.
9ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾಯೋಗವು, ಧರ್ಮಮಾಲಿಕಾ ಯೋಗ. ಈ ಯೋಗದವರು ಗುಣವಂತ, ತೀರ್ಥಯಾತ್ರೆ ಮಾಡುವವರು, ಸಾಧನೆ, ತಪಸ್ಸು ಆಚರಿಸುವವರಾಗುತ್ತಾರೆ ಹಾಗೂ ಧರ್ಮಾಧಿಕಾರಿಯಾಗುತ್ತಾರೆ.
10ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಕರ್ಮಮಾಲಿಕಾ ಯೋಗ. ಈ ಯೋಗದವರು ಧರ್ಮ - ಕರ್ಮ ಅನುಷ್ಠಾನ ಮಾಡುವವರು, ಹಿರಿಯರಿಗೆ ಗೌರವ ಕೊಡುವವರು, ಉತ್ತಮ ವ್ಯಕ್ತಿತ್ವಉಳ್ಳವರಾಗುತ್ತಾರೆ.
11ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಭಮಾಲಿಕಾ ಯೋಗ. ಈ ಯೋಗದವರು ಎಲ್ಲಾ ಕಾರ್ಯಗಳನ್ನು ದಕ್ಷತೆಯಿಂದ ಮಾಡುವವರಾಗುತ್ತಾರೆ.
12ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ವ್ಯಯಮಾಲಿಕಾ ಯೋಗ.ಈ ಯೋಗದವರು ದುಂದುವೆಚ್ಚ ಮಾಡುವವರು ಎಲ್ಲರಿಗೂ ಬೇಕಾಗುವವರು ಹಾಗೂ ಆರಾಧಿಸುವವರಾಗಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.