5. ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ.
6. ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.
7. ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.