ಬೆಂಗಳೂರು: ಭಗವಾನ್ ಶ್ರೀ ಮಹಾವಿಷ್ಣು ಮತ್ತು ಆತನ ವಿವಿಧ ಅವತಾರಗಳಿಗೆ ಅರ್ಪಿತವಾದ ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ದಿನ ಉಪವಾಸ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.
ಇಂದು ಉಪವಾಸ ಮಾಡಿದರೆ ಉಳಿದೆಲ್ಲಾ ದಿನಗಳಲ್ಲಿ ಉಪವಾಸ ಮಾಡಿದಷ್ಟು ಪವಿತ್ರವಾಗಿರುತ್ತದೆ ಎಂದು ನಂಬಲಾಗಿದೆ. ಕೆಟ್ಟ ಯೋಚನೆಗಳನ್ನು ಬಿಟ್ಟು ಭಗವಂತನಲ್ಲಿ ಭಕ್ತಿಯಿಟ್ಟು ಇಂದು ಉಪವಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ.
ಇಂದು ಉಪವಾಸದ ಜೊತೆಗೆ ಮಹಾವಿಷ್ಣುವಿನ ಜೊತೆಗೆ ಲಕ್ಷ್ಮಿಯನ್ನು ಪೂಜೆ ಮಾಡುವುದರಿಂದ ದೇವರ ಪ್ರೀತಿಗೆ ಪಾತ್ರರಾಗುವುದಲ್ಲದೆ, ಸಕಲ ಪಾಪಗಳೂ ಪರಿಹಾರವಾಗಿ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಬದುಕಿನಲ್ಲಿ ಯಾವುದೇ ಕಷ್ಟ ಕಾರ್ಪಣ್ಯಗಳೂ ನಮ್ಮನ್ನು ಬಾಧಿಸದು ಎಂಬ ನಂಬಿಕೆಯಿದೆ.