ಗಣೇಶನ ಇಬ್ಬರು ಪತ್ನಿಯರು ಯಾರೆಲ್ಲಾ?

ಮಂಗಳವಾರ, 30 ಆಗಸ್ಟ್ 2022 (10:47 IST)
ಬೆಂಗಳೂರು: ನಾಳೆ ಗಣೇಶ ಹಬ್ಬವಿದ್ದು, ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಗಣೇಶನ ಬಗ್ಗೆ ಹಲವಾರು ಕತೆಗಳಿವೆ. ಗಣೇಶನಿಗೆ ಇಬ್ಬರು ಪತ್ನಿಯರಿದ್ದರು ಎನ್ನಲಾಗುತ್ತದೆ.

ಅವರೇ ರಿದ್ದಿ  ಮತ್ತು ಸಿದ್ಧಿ. ಇವರಿಬ್ಬರೂ ಬ್ರಹ್ಮನ ಮಕ್ಕಳು ಎನ್ನಲಾಗುತ್ತದೆ. ಇವರಿಬ್ಬರನ್ನೂ ಗಣೇಶ ಬ್ರಹ್ಮ ದೇವನ ಆಜ್ಞೆಯ ಮೇರೆಗೆ ಮದುವೆಯಾದನಂತೆ.

ಗಣೇಶ ಮತ್ತು ರಿದ್ಧಿ-ಸಿದ್ಧಿಗೆ ಇಬ್ಬರು ಮಕ್ಕಳು ಜನಿಸಿದರು. ಅವರೇ ಶುಭ ಮತ್ತು ಲಾಭ. ಗಣೇಶನ ಹೆಚ್ಚಿನ ಫೋಟೋಗಳಲ್ಲಿ ರಿದ್ಧಿ ಮತ್ತು ಸಿದ್ಧಿಯರು ಜೊತೆಯಾಗಿ ಕೂತಿರುವುದನ್ನು ನೀವು ಗಮನಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ