ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!
ಮಂಗಳವಾರ, 12 ಫೆಬ್ರವರಿ 2019 (09:14 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ಮಿಥುನ ರಾಶಿ
ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರು ತಮ್ಮ ಬುದ್ಧಿವಂತಿಕೆ, ಸ್ನೇಹ ಮನೋಭಾವದಿಂದಾಗಿ ಪ್ರಭಾವಶಾಲಿಗಳಾಗಿರುತ್ತಾರೆ. ಇವರು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬಲ್ಲರು. ಮೃದುಭಾಷಿಗಳು ಮತ್ತು ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುವರು. ಇವರು ಭಾಷೆ ಮೇಲೆ ಉತ್ತಮ ಹಿಡಿತ ಹೊಂದಿರುತ್ತಾರೆ.
ಅವಗುಣಗಳೆಂದರೆ, ಇವರು ಬೇಗನೇ ತಾಳ್ಮೆ ಕಳೆದುಕೊಳ್ಳುತ್ತಾರೆ. ಬೇಗನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಮತ್ತು ಗಮನ ಕಳೆದುಕೊಳ್ಳುತ್ತಾರೆ. ಅವರ ಸಲಹೆಗಳು ಕೆಲವೊಮ್ಮೆ ಇತರರಿಗೆ ಇಷ್ಟವಾಗದೇ ಹೋಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ