ದೇವರ ಮನೆ ಹೀಗಿದ್ದರೆ ಮನೆಯಲ್ಲಿ ಅಭಿವೃದ್ಧಿ ಖಂಡಿತಾ

ಗುರುವಾರ, 24 ಜನವರಿ 2019 (09:18 IST)
ಬೆಂಗಳೂರು: ದೇವರ ಮನೆ ನಾವು ಹೇಗಿಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಮನೆಯ ಸುಖ-ಸಂಪತ್ತು ನಿರ್ಧಾರವಾಗುತ್ತದೆ ಎಂಬ ಮಾತಿದೆ. ಹಾಗಿದ್ದರೆ ದೇವರ ಮನೆ ಹೇಗಿರಬೇಕು? ಇಲ್ಲಿದೆ ನೋಡಿ ಕೆಲವು ಸಲಹೆಗಳು.


ದೇವರ ಮನೆ ಸಾಮಾನುಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟು ಒಳ್ಳೆಯದು.ದೇವರ ಮನೆಯಲ್ಲಿ ಒಡೆದಿರುವ ವಿಗ್ರಹ, ಫೋಟೋ, ಯಂತ್ರಗಳನ್ನು ಇಡಬೇಡಿ. ದೇವರ ಮನೆಯನ್ನು ಗುಡಿಸಲು ಒರೆಸಲು ಪ್ರತ್ಯೇಕ ಬಟ್ಟೆ, ಕಸಬರಿಕೆ ಇರಬೇಕು.

ದೇವರ ಮನೆಯನ್ನು ಅರಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವ ಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ.ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಇರಬಾರದು. ವಿಗ್ರಹಗಳು ಜಾಸ್ತಿಯಾದಂತೆ ನೈವೇದ್ಯದ ಪ್ರಮಾಣವೂ ಹೆಚ್ಚು ಮಾಡಬೇಕು.

ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ, ಶುಕ್ರವಾರದಂದು ಶುದ್ಧ ಮಾಡಬಾರದು. ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರುವ ಘಂಟೆಯನ್ನೇ ಬಳಸಿ. ಆಂಜನೇಯ ಸ್ವಾಮಿಯ ಪಾದವನ್ನು ಹಿಡಿದು ಘಂಟೆ ಬಾರಿಸಬೇಕು.

ದೇವರ ಹತ್ತಿರ ಮಧುಪರ್ಕ ಇರಿಸಿ ಅದನ್ನು ರಾತ್ರಿ ಮಲಗುವ ಮೊದಲು ಮನೆಯವರೆಲ್ಲಾ ಭಕ್ತಿಯಿಂದ ಸೇವಿಸಿದರೆ ಒಳ್ಳೆಯದು. ಸಂಧ್ಯಾವಂದನೆ ಮತ್ತು ಸ್ತ್ರೀಯರು ತುಳಸಿ ಪೂಜೆ ಮಾಡದೇ ಯಾವ ಪೂಜೆಯ ಫಲವೂ ದೊರೆಯದು.

ದೇವರ ಪೂಜೆ ಸಮಯದಲ್ಲಿ ಪುರುಷರು ಮೇಲು ಹೊದಿಕೆಯನ್ನು ಧರಿಸಬೇಕು. ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು. ಹಣೆಯಲ್ಲಿ ಕುಂಕುಮ, ಭಸ್ಮ ಅಥವಾ ಗಂಧ ಧರಿಸಬೇಕು. ಇಲ್ಲದಿದ್ದರೆ ಪೂಜಾ ಫಲ ಸಿಗದು.’

ದೇವರ ಪೂಜೆಗೆ ಹಸಿಯಾದ ಹಾಲನ್ನು ಮಾತ್ರ ಬಳಸಬೇಕು. ದೇವರಿಗೆ ನೈವೇದ್ಯ ಕೊಡುವಾಗ ತುಳಸಿ ಪತ್ರೆಯೊಂದಿಗೆ ಕೊಡಬೇಕು.ದೇವರ ಮನೆಯಲ್ಲಿ ಚಿಕ್ಕ ದೀಪಗಳನ್ನು ಜೋಡಿಸಿ ಇಡಿ. ದೊಡ್ಡ ದೀಪಗಳಾಗಿದ್ದರೆ ಎಡಗಡೆ, ಬಲಗಡೆ ಇಡಬೇಕು. ಹೀಗಿದ್ದರೆ ಮಾತ್ರ ಫಲ ಪ್ರಾಪ್ತಿಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ