ಸರ್ವ ಧರ್ಮ ಪ್ರಿಯರಾದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಂಬನಿ ಮಿಡಿದ ಮುಸ್ಲಿಮರು

ಮಂಗಳವಾರ, 22 ಜನವರಿ 2019 (14:14 IST)
ತುಮಕೂರು : ಯಾವುದೇ ಜಾತಿ. ಧರ್ಮ ಭೇದ ತೋರದೆ  ಸರ್ವ ಧರ್ಮ ಪ್ರಿಯರು ಆದ ಸಿದ್ದಗಂಗಾ ಶ್ರೀಗಳ ಅಗಲಿಕೆಯ ಹಿನ್ನಲೆಯಲ್ಲಿ ತುಮಕೂರು ನಗರದ  ಮುಸ್ಲಿಮರು ಕೂಡ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ನಗರದ ಸಂತೆಪೇಟೆ ಹಾಗೂ ಮೇಲೆ ಪೇಟೆಗಳಲ್ಲಿ ಆಟೋ ಚಾಲಕರು, ತರಕಾರಿ ವ್ಯಾಪಾರಿಗಳೆಲ್ಲಾ ಒಟ್ಟಾಗಿ ಹಿಂದು ಸಂಪ್ರದಾಯದಂತೆ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದ್ದಾರೆ.

 

ಅಲ್ಲದೇ ಸಿದ್ದಗಂಗಾ ಶ್ರೀಗಳಿಗೆ ಭಾರತ ಸರ್ಕಾರ, ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ. ವಿವಿಧೆಡೆಗಳಿಂದ ಆಗಮಿಸಿರುವ ಶ್ರೀಗಳ ಭಕ್ತರಿಗಾಗಿ ಮುಸ್ಲಿಮರು ಸಿಹಿ ಖಾದ್ಯ ಹಾಗೂ ಉಪಹಾರ ವ್ಯವಸ್ಥೆ ಕೂಡ ಕಲ್ಪಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ