ವೈಕುಂಠ ಏಕಾದಶಿಗೆ ಉಪವಾಸ ಯಾಕೆ ಮಾಡಬೇಕು?
ಭಗವಾನ್ ಮಹಾವಿಷ್ಣು ಮುರಾ ಎಂಬ ರಾಕ್ಷಸನನ್ನು ಏಕಾದಶ ಎಂಬ ಆಯುಧದಿಂದ ಸಂಹರಿಸಿದ ದಿನ ಎಂದೂ ನಂಬಿಕೆಯಿದೆ. ಈ ದಿನ ಉಪವಾಸವಿದ್ದು ವ್ರತ ಕೈಗೊಳ್ಳಲಾಗುತ್ತದೆ.
ಏಕಾದಶಿ ದಿನ ಉಪವಾಸ ವ್ರತ ಕೈಗೊಂಡು ವಿಷ್ಣುವಿನ ಪೂಜೆ ಮಾಡಿದರೆ ಪಿತೃದೋಷಗಳು ನಿವಾರಣೆಯಾಗುತ್ತವೆ. ಹೀಗಾಗಿ ಇದನ್ನು ಮೋಕ್ಷದ ಏಕಾದಶಿ ಎಂದೂ ಕರೆಯಲಾಗುತ್ತದೆ.
ಅಲ್ಲದೆ, ವೈಕುಂಠ ಏಕಾದಶಿ ದಿನ ವ್ರತ ಕೈಗೊಂಡರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ ಈ ದಿನ ವ್ರತ ಕೈಗೊಂಡಲ್ಲಿ ಅಶ್ವಮೇಧ ಯಾಗದ ಫಲ ದೊರೆತಂತೆ ಎಂಬ ನಂಬಿಕೆಯೂ ಇದೆ. ಜೊತೆಗೆ ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯಕ್ಕಾಗಿ ಇಂದು ಉಪವಾಸ ವ್ರತ ಕೈಗೊಂಡು ಮಹಾವಿಷ್ಣುವಿನ ಆರಾಧನೆ ಮಾಡಿದರೆ ನಮಗೆ ಒಳಿತಾಗುತ್ತದೆ.