ಜ್ಯೋತಿಷಿಗಳ ಪ್ರಕಾರ, ಮಲಗಿದ್ದಾಗ ಆತ್ಮ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಅದು ಎಚ್ಚರದ ಸ್ಥಿತಿಯಲ್ಲೇ ಇರುತ್ತದೆ. ಮನಸ್ಸು ದೇಹ ವಿಶ್ರಾಂತಿಯ ಸ್ಥಿಯಲ್ಲಿದ್ದಾಗ ಪಂಚೇಂದ್ರಿಯಗಳೂ ಶಾಂತ ಸ್ಥಿತಿಯಲ್ಲಿರುತ್ತದೆ. ಆಗ ಅನುಭವವಾಗುವ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೇ ಕನಸುಗಳು. ಈ ಕನಸು ಅರ್ಥಾತ್ ಸ್ವಪ್ನಗಳಿಗೂ ಭೂತ, ಭವಿಷ್ಯ, ವರ್ತಮಾನಕ್ಕೂ ಸಂಬಂಧವಿದೆಯೇ ಎಂಬುದನ್ನು ಜ್ಯೋತಿಷ್ಯ ವಿಜ್ಞಾನದಲ್ಲೂ ಸಾಕಷ್ಟು ವಿವರಣೆಯಿದೆ. ಕನಸಿನಲ್ಲಿ ಕಂಡ ವಸ್ತುಗಳಿಗೂ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳಿಗೂ ಇರುವ ತಾಳಮೇಳವನ್ನು ಜ್ಯೋತಿಷ್ಯ ಹೀಗೆ ಹೇಳುತ್ತದೆ.
ಕನಸಿನಲ್ಲಿ ನೀವು ಮೀನು ನೋಡಿದರೆ ಮನೆಯಲ್ಲಿ ಸದ್ಯದಲ್ಲೇ ಶುಭ ಕಾರ್ಯ ನಡೆಯುತ್ತದೆ ಎಂದರ್ಥ. ಮಾಂಸ ತಿನ್ನುವಂತೆ ಕನಸು ಬಿದ್ದರೆ ನಿಮಗೆ ಏನೋ ಗಾಯವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ತಾನೇ ಸತ್ತುಹೋದಂತೆ ಕನಸು ಬಿದ್ದರೆ ಫೇಲ್ ಆಗುವ ಸಂಭವ ಇದೆ. ಗಾಳಿಯಲ್ಲಿ ಹಕ್ಕಿಯಂತೆ ಹಾರಾಡುವ ಕನಸು ಕಂಡರೆ ನಿಮಗೆ ಸದ್ಯದಲ್ಲೇ ಪ್ರಯಾಣಯೋಗವಿರಲಿದೆ. ಕೈಕಾಲು ತೊಳೆದುಕೊಂಡಂತೆ ಕನಸು ಬಿದ್ದರೆ ಎಲ್ಲ ಚಿಂತೆಗಳನ್ನೂ ಬಿಟ್ಟು ನಿಶ್ಚಿಂತರಾದಂತೆ. ಯಾರಿಂದಲೋ ಚುಂಬನ ಸ್ವೀಕರಿಸಿದಂತೆ ಕನಸು ಬಿದ್ದರೆ ಸದ್ಯದಲ್ಲೇ ನಿಮ್ಮನ್ನು ಮಟ್ಟಹಾಕಲು ಶತ್ರುಗಳಾರೋ ಕಾಯುತ್ತಿದ್ದಾರೆ ಎಂದರ್ಥ.
ಹಾವನ್ನು ಹಿಡಿದುಕೊಂಡಂತೆ ಕನಸು ಕಂಡರೆ ಸಫಲತೆ ಪ್ರಾಪ್ತವಾಗುತ್ತದೆ. ಉದ್ದಕ್ಕೆ ದಾಡಿ ಬಿಟ್ಟಂತೆ ಕನಸು ಬಿದ್ದರೆ ದಾಂಪತ್ಯ ಜೀವನದಲ್ಲಿದ್ದ ಕಷ್ಟಗಳೆಲ್ಲ ಕರಗಿ ಹೋಗುತ್ತದೆ. ಯಾರೋ ಹಿರಿಯರ ಆಶೀರ್ವಾದ ಪಡೆದಂತೆ ಕನಸು ಬಿದ್ದರೆ, ಮಾನ ಸನ್ಮಾನ ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ ಎಂದರ್ಥ. ಹಾಲು ಕುಡಿದಂತೆ ಕನಸು ಬಿದ್ದರೆ ಗೌರವ ಪ್ರಾಪ್ತಿಯಾಗುತ್ತದೆ. ಬಾಯಾರಿಕೆಯಾಗಿ ನೀರು ಕುಡಿದಂತೆ ಕಂಡರೆ ಭಾಗ್ಯೋದಯವಾಗುತ್ತದೆ. ನಾಯಿ ಕಚ್ಚಿದಂತೆ, ಹಾಗೂ ನಾಯಿಯನ್ನು ಸಾಕಿದಂತೆ ಕನಸು ಬಿದ್ದರೆ ಸಂಕಟ ಪ್ರಾಪ್ತಿಯಾಗುತ್ತದೆ. ಹಾರುವ ಹಕ್ಕಿಯನ್ನು ಕನಸಿನಲ್ಲಿ ಕಂಡಿರಾರೆ, ನಿಮಗೆ ಗೌರವ, ಮಾನ ಸನ್ಮಾನಗಳು ದೊರಕುತ್ತದೆ.