ಪ್ರತ್ಯೇಕ ನಾಡಧ್ವಜ ಆರು ಕೋಟಿ ಕನ್ನಡಿಗರ ಕನಸು: ಸಿಎಂ ಸಿದ್ದರಾಮಯ್ಯ

ಭಾನುವಾರ, 15 ಅಕ್ಟೋಬರ್ 2017 (16:46 IST)
ಪ್ರತ್ಯೇಕ ನಾಡಧ್ವಜವಿರಬೇಕು ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕ ನಾಡಧ್ವಜವಿರಬೇಕು ಎನ್ನುವುದು ಆರು ಕೋಟಿ ಕನ್ನಡಿಗರ ಬಯಕೆಯಾಗಿದೆ. ಕಳೆದ 1966 ರಿಂದ ಕರ್ನಾಟಕ ನಾಡಧ್ವಜವನ್ನು ಹೊಂದಿದೆ. ಸಂವಿಧಾವ ಕೂಡಾ ಯಾವುದೇ ರಾಜ್ಯ ತನ್ನದೇ ಆದ ಧ್ವಜವನ್ನು ಹೊಂದುವುದನ್ನು ನಿಷೇಧಿಸಿಲ್ಲ. ಆದ್ದರಿಂದ, ನಮ್ಮದೇ ಆದ ಪ್ರತ್ಯೇಕ ಧ್ವಜ ಹೊಂದಬೇಕು ಎಂದರು. 
 
ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಮೂರು ಭಾಷೆಗಳನ್ನು ಬಳಸಲು ಸಾಧ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
 
ತಮಿಳುನಾಡು ಮತ್ತು ಕೇರಳ ರಾಜ್ಯಗಳು ಎರಡು ಭಾಷಾ ನೀತಿಯನ್ನು ಪಾಲಿಸುತ್ತಿವೆ. ಕರ್ನಾಟಕಕ್ಕೆ ಮೂರು ಭಾಷಾ ನೀತಿ ಏಕೆ ಹೇರಬೇಕು? ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
 
ಕನ್ನಡ ಭಾಷೆಗಾಗಿ ಹೋರಾಟ ಮಾಡಿದ ಕಾರ್ಯಕರ್ತರ ವಿರುದ್ಧದ ಕೇಸ್‌ಗಳನ್ನು ಸರಕಾರ ವಾಪಸ್ ಪಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ