ದೇವಾಲಯಗಳಿಗೆ ಮಾಂಸದೂಟ ಮಾಡಿ ಹೋಗಬಾರದು ಯಾಕೆ?
ಈ ಬಗ್ಗೆ ನಿಯಮ-ಕಟ್ಟಪ್ಪಣೆಗಳು ಏನೂ ಇಲ್ಲದೇ ಇರಬಹುದು. ಆದರೆ ಧಾರ್ಮಿಕ ಶ್ರದ್ಧೆಯಿಂದ ನಾವು ದೇವರನ್ನು ಪ್ರಾರ್ಥಿಸುವಾಗ ನಮ್ಮ ಮನಸ್ಸು, ದೇಹ ಎರಡೂ ಶುದ್ಧವಾಗಿರಬೇಕು, ಚೈತನ್ಯದಿಂದ ಕೂಡಿರಬೇಕು.
ಹೊಟ್ಟೆ ತುಂಬಾ ಉಂಡು, ಆಲಸ್ಯದಿಂದ ದೇವರ ಎದುರು ನಿಂತು ಪ್ರಾರ್ಥನೆ ಮಾಡುವುದರಿಂದ ಯಾವುದೇ ಪ್ರಯೋಜನವೂ ಆಗದು. ಅದರ ಬದಲು ಲಘು ಉಪಾಹಾರ ಸೇವಿಸಿ, ಶ್ರದ್ಧೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಶುಚೀಭೂತರಾಗಿ ದೇವರ ಪ್ರಾರ್ಥನೆ ಮಾಡುವುದು ಶ್ರೇಷ್ಠ.