ದೇಶದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ-ಕೋಡಿಮಠದ ಸ್ವಾಮೀಜಿಯಿಂದ ಭವಿಷ್ಯ..!

ಶುಕ್ರವಾರ, 19 ಆಗಸ್ಟ್ 2022 (16:47 IST)
ದೇಶದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷಗಳಿಗೆ ಕೊರತೆ ಮುಖ್ಯ ಕಾರಣ. ಇದರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಶುಭಕೃತ ನಾಮಸಂವತ್ಸರವು ದೇಶದಲ್ಲಿ ಅಶುಭವನ್ನುಂಟುಮಾಡಲಿದೆ. ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯ ಮಾಡಿತು. ಪೂರ್ಣ ಪ್ರಮಾಣದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಪ್ರಾಥಮಿಕ ನಾಡಿನಲ್ಲಿ ಬೆಂಕಿ ಅನಾಹುತ ಸಂಭವಿಸುವ ಲಕ್ಷಣವಿದೆ ಎಂದೆನಿಸುತ್ತದೆ. ಕಾರ್ತಿಕ ಮಾಸದಲ್ಲಿ ಪ್ರಾಕೃತಿಕ ವಿಕೋಪಗಳು ನಡೆಯಲಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಇಬ್ಭಾಗವಾಗುವ ಸಂಭವವಿದೆ. ಹಿಂಗಾರು ಮಳೆ ಕಡಿಮೆಯಾಗಿ ಅಕಾಲಿಕ ಮಳೆಯಾಗಲಿದೆ, ರೋಗ ರುಜಿನಗಳು ಕಾಣಿಸಿಕೊಳ್ಳಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ