ಮುಖದಲ್ಲಿನ ಮೇಕಪ್ ತಾಜಾವಾಗಿರಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಭಾನುವಾರ, 28 ಜನವರಿ 2018 (06:29 IST)
ಬೆಂಗಳೂರು: ಯಾವುದಾದರೂ ಫಂಕ್ಷನ್‌ಗೆ ಹೋಗುವಾಗ ಅಂದವಾಗಿ ಕಾಣಬೇಕೆಂದು ಮುಖಕ್ಕೆ ಫೌಂಡೇಷನ್ ಹಚ್ಚಿ ಅಲಂಕಾರ ಮಾಡಿಕೊಂಡು ಹೋಗುತ್ತೇವೆ. ಆದರೆ ಹಚ್ಚಿದ ಫೌಂಡೇಷನ್ ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಗಿ ಬಿಟ್ಟರೆ ಬೇಸರವಾಗುತ್ತದೆ. ಹಾಗಾಗಿ ಮೇಕಪ್ ಅನ್ನು ತಾಜಾವಾಗಿರಿಸಿಕೊಳ್ಳಲಿ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.

ಮಾಯಿಶ್ಚರೈಸರ್
ಒಣ ತ್ವಚೆಯವರು ಫೌಂಡೇಷನ್ ಹಚ್ಚುವ 10 ನಿಮಿಷ ಮುನ್ನ ಮಾಯಿಶ್ಚರೈಸರ್‌ ಹಚ್ಚಿ.

ಪ್ರೀಮಿಯರ್
ಪ್ರೀಮಿಯರ್ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು. ಆದ್ದರಿಂದ ಪ್ರೀಮಿಯರ್‌ ಹಚ್ಚಿ. ಇದು ಮುಖದಲ್ಲಿರುವ ಕಲೆ ಹಾಗೂ ರಂಧ್ರಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ.

ಫೌಂಡೇಷನ್ಬಳಕೆ
ಫೌಂಡೇಷನ್ ಹಚ್ಚಲು ಬ್ರಷ್‌ ಅಥವಾ ಬ್ಲೆಂಡರ್‌ ಬಳಸಿ ಕೈಯಿಂದ ಫೌಂಡೇಷನ್ ಹಚ್ಚಬೇಡಿ. ಹೀಗೆ ಮಾಡುವುದರಿಂದ ಮುಖದಲ್ಲಿ ಫೌಂಡೇಷನ್ ತುಂಬಾ ಹೊತ್ತು ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ