ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

Sampriya

ಭಾನುವಾರ, 8 ಮಾರ್ಚ್ 2026 (12:07 IST)
Photo Courtesy X
ಪ್ರಸ್ತುತ ರಾಜ್ಯದಲ್ಲಿರುವ ಬಿಸಿಲ ತಾಪಕ್ಕೆ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಿರ್ಜಲೀಕರಣವಾಗಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಇದನ್ನು ನಿರ್ಲಕ್ಷಿಸುವುದು ಕೂಡಾ ಆರೋಗ್ಯಕ್ಕೆ ತುಂಬಾನೇ ದೊಡ್ಡ ಹೊಡೆತವನ್ನು ನೀಡುವ ಸಾಧ್ಯತೆಯಿದೆ.  

1. ನಿರ್ಜಲೀಕರಣದ ಲಕ್ಷಣಗಳು
    ವಿಪರೀತ ಬಾಯಾರಿಕೆ.
    ಬಾಯಿ ಮತ್ತು ಗಂಟಲು ಒಣಗುವುದು.
    ಲಘು ತಲೆನೋವು ಅಥವಾ ತಲೆಸುತ್ತು.
    ಮೂತ್ರದ ಬಣ್ಣ ಗಾಢ ಹಳದಿಯಾಗುವುದು ಮತ್ತು ಮೂತ್ರದ ಪ್ರಮಾಣ ಕಡಿಮೆಯಾಗುವುದು.
    ಅತಿಯಾದ ಸುಸ್ತು ಅಥವಾ ನಿಶಕ್ತಿ.
ಇದರಿಂದ ಆಗುವ ಆರೋಗ್ಯದ ಮೇಲಿನ ಸಮಸ್ಯೆಗಳು
    ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು.
    ಅತಿಯಾದ ಬೆವರುವಿಕೆ (ಬಿಸಿಲಿನಲ್ಲಿ ಕೆಲಸ ಮಾಡುವುದು ಅಥವಾ ವ್ಯಾಯಾಮ).
    ವಾಂತಿ ಮತ್ತು ಭೇದಿ.
    ಜ್ವರ.
3. ತಡೆಗಟ್ಟುವ ಕ್ರಮಗಳು ಮತ್ತು ಪರಿಹಾರಗಳು
    ಹೆಚ್ಚು ನೀರು ಕುಡಿಯಿರಿ: ಬಾಯಾರಿಕೆಯಾಗದಿದ್ದರೂ ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
    ಎಳನೀರು: ಇದು ದೇಹಕ್ಕೆ ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತದೆ.
   oRS (ಓ.ಆರ್.ಎಸ್): ತೀವ್ರವಾದ ನಿರ್ಜಲೀಕರಣವಿದ್ದರೆ ನೀರಿನಲ್ಲಿ ಓ.ಆರ್.ಎಸ್ ಪುಡಿ ಬೆರೆಸಿ ಕುಡಿಯುವುದು ಉತ್ತಮ.
    ನೀರಿನಂಶವಿರುವ ಹಣ್ಣುಗಳು: ಕಲ್ಲಂಗಡಿ, ಕಿತ್ತಳೆ, ಸೌತೆಕಾಯಿ ಮತ್ತು ಮೊಸರು/ಮಜ್ಜಿಗೆಯನ್ನು ಸೇವಿಸಿ.
    ಕೆಫೀನ್ ಕಡಿಮೆ ಮಾಡಿ: ಅತಿಯಾದ ಕಾಫಿ, ಟೀ ಅಥವಾ ಸಕ್ಕರೆಯುಕ್ತ ಪಾನೀಯಗಳು ದೇಹವನ್ನು ಮತ್ತಷ್ಟು ನಿರ್ಜಲೀಕರಣಗೊಳಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ