ಕಂಕುಳದಲ್ಲಿ ಕಪ್ಪು ಕಲೆ ಹೋಗಲಾಡಿಸಲು ಹೀಗೆ ಮಾಡಿ

ಮಂಗಳವಾರ, 6 ಜೂನ್ 2017 (09:32 IST)
ಬೆಂಗಳೂರು: ಅಂಡರ್ ಆರ್ಮ್ ಅಥವಾ ಕಂಕುಳದಲ್ಲಿ ಕಪ್ಪು ವರ್ತುಲವಿದ್ದರೆ ಸ್ಲೀವ್ ಲೆಸ್ ಉಡುಗೆ ತೊಡುವುದು ಕಷ್ಟ. ಅಂಡರ್ ಆರ್ಮ್ ಬೆಳ್ಳಗಾಗಿಸಲು ಮನೆಯಲ್ಲೇ ಒಂದು ಸಿಂಪಲ್ ಕೆಲಸ ಮಾಡಿ ನೋಡಿ.

 
ಅದಕ್ಕೆ ಬೇಕಾಗಿರುವುದು ಟೊಮೆಟೊ ಅಥವಾ ನಿಂಬೆ ಹಣ್ಣು. ಇವೆರಡೂ ನಮ್ಮ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಆ ಮನೆ ಮದ್ದು ತಯಾರಿಸುವುದು ಹೇಗೆಂದು ನೋಡೋಣ.

ನಿಂಬೆ ಹಣ್ಣಿನ ಜ್ಯೂಸ್
ನಿಂಬೆ ಹಣ್ಣಿನ ಜ್ಯೂಸ್ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುವುದಷ್ಟೇ ಅಲ್ಲ, ಆಂಟಿ ಸೆಪ್ಟಿಕ್ ಆಗಿಯೂ ಕೆಲಸ ಮಾಡುತ್ತದೆ. ಹಾಗಾಗಿ ಇದು ಕಪ್ಪಗಿನ ಚರ್ಮವನ್ನು ಬಿಳಿ ಮಾಡುವ ಗುಣವೂ ಇದಕ್ಕಿದೆ.  ಸ್ನಾನ ಮಾಡುವ ಮೊದಲು 15 ನಿಮಿಷ ನಿಂಬೆ ಹಣ್ಣನ್ನು ಕತ್ತರಿಸಿ ಅಂಡರ್ ಆರ್ಮ್ ಗೆ ಉಜ್ಜಿಕೊಳ್ಳಿ. ಇದೇ ರೀತಿ ವಾರಕ್ಕೆರಡು ಬಾರಿ ಮಾಡುತ್ತಿರಿ.

ಟೊಮೆಟೊ ಜ್ಯೂಸ್
ಹಸಿ ಟೊಮೆಟೊ ರಸ ಕೂಡಾ ಕಪ್ಪಗಿನ ಚರ್ಮವನ್ನು ಬಿಳಿ ಮಾಡುವ ಗುಣ ಹೊಂದಿದೆ. ಇದು ಈ ಭಾಗದಲ್ಲಿ ಬೆವರು ಕಡಿಮೆಗೊಳಿಸುವುದರಿಂದ ಚರ್ಮ ಕಪ್ಪಗಾಗುವುದನ್ನು ತಡೆಯುತ್ತದೆ. ಇದಕ್ಕೆ ಮಾಡಬೇಕಾಗಿರುವುದು ತುಂಬಾ ಸಿಂಪಲ್ ಕೆಲಸ. ರಾತ್ರಿ ಮಲಗುವ ಮೊದಲು ಟೊಮೆಟೊ ರಸವನ್ನು ಕಂಕುಳಗಳಿಗೆ ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಅಂಡರ್ ಆರ್ಮ್ ಬೆಳ್ಳಗಾಗುತ್ತದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ