ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

Krishnaveni K

ಸೋಮವಾರ, 7 ಜುಲೈ 2025 (11:12 IST)
ಬೆಂಗಳೂರು: ದಪ್ಪಗಿದ್ದರೆ ಸಾಕು ಕೊಲೆಸ್ಟ್ರಾಲ್ ಹೆಚ್ಚಾಗಿರಬೇಕು ಎಂದುಕೊಳ್ಳುತ್ತೇವೆ. ತೆಳ್ಳಗಿದ್ದವರಿಗೆ ಕೊಲೆಸ್ಟ್ರಾಲ್ ಇರಲ್ಲ ಎಂದುಕೊಳ್ಳುತ್ತೇವೆ. ಅಸಲಿಗೆ ನಿಜವೇನು?
 

ತೆಳ್ಳಗಿದ್ದವರಿಗೆ ಕೊಲೆಸ್ಟ್ರಾಲ್ ಬರಲ್ವಾ? ಖಂಡಿತಾ ಬರಬಹುದು ಎನ್ನುತ್ತಾರೆ ತಜ್ಞ ವೈದ್ಯರು. ಕೊಲೆಸ್ಟ್ರಾಲ್ ಗೂ ನಮ್ಮ ದೇಹ ದಪ್ಪ ಅಥವಾ ತೆಳ್ಳಗಿರುವುದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಾರೆ ತಜ್ಞರು. ದಪ್ಪಗಿದ್ದವರಿಗೆಲ್ಲಾ ಕೊಲೆಸ್ಟ್ರಾಲ್ ಹೆಚ್ಚಾಗಬೇಕೆಂದಿಲ್ಲ. ತೆಳ್ಳಗಿದ್ದವರಿಗೆಲ್ಲಾ ಕೊಲೆಸ್ಟ್ರಾಲ್ ಇರಲ್ಲ ಅಂತೇನಿಲ್ಲ.

ಹೃದಯಾಘಾತದ ಸಮಸ್ಯೆಗೆ ಮುಖ್ಯ ಕಾರಣಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದು ಒಂದಾಗಿದೆ. ನಮ್ಮ ದೇಹದಲ್ಲಿ ನಾವು ಸೇವಿಸುವ ಆಹಾರಗಳಿಂದಲೇ ಶೇ.80 ರಷ್ಟು ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ಹೀಗಾಗಿ ನಮ್ಮ ಜೀವನ ಶೈಲಿ ಇದಕ್ಕೆ ಕಾರಣವಾಗಿರುತ್ತದೆ ಹೊರತು ದೇಹ ಗಾತ್ರವಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಕೊಲೆಸ್ಟ್ರಾಲ್ ನ್ನು ನಿಯಂತ್ರಣಕ್ಕೆ ತರದೇ ಹೋದರೆ ಹೃದಯದ ಖಾಯಿಲೆ ಬರುವ ಸಾಧ್ಯತೆ ಹೆಚ್ಚು. ಹೃದಯದ ರಕ್ತನಾಳಗಳು ಬ್ಲಾಕ್ ಆಗುವುದು, ಹೃದಯಾಘಾತವಾಗುವುದಕ್ಕೆ ಕೊಲೆಸ್ಟ್ರಾಲ್ ಕಾರಣವಾಗಿರುತ್ತದೆ. ಹೀಗಾಗಿ ಆರೋಗ್ಯಕರ ಆಹಾರ, ಜೀವನಶೈಲಿ ಅತೀ ಮುಖ್ಯವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ