ಮನೆಯಲ್ಲೇ ಸುಲಭವಾಗಿ ಸ್ಟ್ರೈಟ್ ಹೇರ್ ಮಾಡಿ

ಗುರುವಾರ, 1 ಜೂನ್ 2017 (11:24 IST)
ಬೆಂಗಳೂರು: ಗುಂಗುರು ಅಥವಾ ಮೊಂಡು ಕೂದಲು ಹೊಂದಿದವರಿಗೆ ಕೂದಲನ್ನು ನೇರವಾಗಿಸುವ ಬಯಕೆ. ಹಾಗೆ ಮಾಡಬೇಕಾದರೆ ಸುಲಭ ವಿಧಾನವಿದೆ. ಹೇಗೆ?

 
ಏನೆಲ್ಲಾ ಬೇಕು?
ದಪ್ಪ ತೆಂಗಿನ ಹಾಲು
ಕಾರ್ನ್ ಫ್ಲೋರ್
ನೀರು
ಬಾದಾಮ್ ಎಣ್ಣೆ

ಜೆಲ್ ತಯಾರಿ ಮಾಡೋದು ಹೇಗೆ?
ಜೆಲ್ ತಯಾರಿ ಮಾಡುವುದು ತುಂಬಾ ಸುಲಭ. ಕಾರ್ನ್ ಫ್ಲೋರ್ ಗೆ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನ ಹಾಲು, ಒಂದೆರಡು ಸ್ಪೂನ್ ಬಾದಾಮ್ ಎಣ್ಣೆ ಹಾಕಿಕೊಂಡು ಚೆನ್ನಾಗಿ ಬಿಸಿ ಮಾಡಿ. ಇದು ಜೆಲ್ ರೂಪಕ್ಕೆ ಬರುವಷ್ಟು ಹೊತ್ತು ಬಿಸಿ ಮಾಡಬೇಕು.

ನಂತರ ಕೂದಲುಗಳಿಗೆ ಬ್ರಷ್ ಬಳಸಿ ಜೆಲ್ ಹಚ್ಚಿಕೊಳ್ಳಿ. ಮತ್ತೆ ಬಾಚಿಕೊಂಡು ಇನ್ನೊಮ್ಮೆ ಹಚ್ಚಿಕೊಳ್ಳಿ. ಹೀಗೆ ಕೂದಲುಗಳಿಗೆ ಜೆಲ್ ಸರಿಯಾಗಿ ಹಿಡಿಯುವವರೆಗೂ ಜೆಲ್ ಹಚ್ಚಿಕೊಳ್ಳುತ್ತಿರಿ. ಸ್ವಲ್ಪ ಹೊತ್ತು ಬಿಟ್ಟು ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ಹೀಗೇ ಮಾಡುತ್ತಿದ್ದರೆ ನೇರ ಕೂದಲು ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ