ಅಂಗೈ ದೂರದಲ್ಲೇ ನೈಸರ್ಗಿಕ ಸೌಂದರ್ಯ ವರ್ಧಕಗಳು

ಮಂಗಳವಾರ, 20 ಜೂನ್ 2017 (09:33 IST)
ಬೆಂಗಳೂರು: ಸೌಂದರ್ಯ ವರ್ಧಕಗಳಿಗಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗಬೇಕಿಲ್ಲ. ನಿಮ್ಮ ಮನೆಯಲ್ಲೇ ನಿಮ್ಮ ಸೌಂದರ್ಯ ಕಾಪಾಡುವ ವಸ್ತುಗಳಿವೆ.

 
ಉದಾಹರಣೆಗೆ ಬೆಳ್ಳುಳ್ಳಿ. ಮೊಡವೆ ಸಮಸ್ಯೆ ಎಲ್ಲರಿಗೂ ಸಾಮಾನ್ಯ. ಮೊಡವೆ ಬಂದು ಕೀವು ಬಂದ ಹಾಗಿದ್ದರೆ, ಬೆಳ್ಳುಳ್ಳಿ ರಸವನ್ನು ಕೀವು ಇರುವ ಜಾಗಕ್ಕೆ ಹಚ್ಚಿ ರಾತ್ರಿ ಮಲಗಿ. ಬೆಳಿಗ್ಗೆ ಎದ್ದ ಮೇಲೆ ಶುದ್ಧ ನೀರಿನಿಂದ ಮುಖ ತೊಳೆಯುತ್ತಿದ್ದರೆ ಈ ಮೊಡವೆಗೆ ಪರಿಹಾರ ಪಡೆಯಬಹುದು.

ಚರ್ಮ ಬಿರುಕು ಬಿಡುವುದು, ಕಾಲು ಹಿಮ್ಮಡಿ ಒಡೆಯುವುದು, ಸೀಳು ಕೂದಲು ಮುಂತಾದ ಸಮಸ್ಯೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡಿರಿ. ಅದೇ ರೀತಿ ಬಿರುಕು ಚರ್ಮದ ಸಮಸ್ಯೆಗೆ ಜೇನು ತುಪ್ಪ ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಇನ್ನು ಕಪ್ಪು ವರ್ತುಲ, ಮೊಡವೆ ಮುಂತಾದ ಸಮಸ್ಯೆಗೆ ಅಲ್ಯುವೀರಾದ ರಸ ಉತ್ತಮ. ನಿಯಮಿತವಾಗಿ ಮುಖಕ್ಕೆ ಮತ್ತು ಚರ್ಮಕ್ಕೆ ಅಲ್ಯುವೀರಾ ರಸವನ್ನು ಹಚ್ಚುತ್ತಿದ್ದರೆ ಚರ್ಮ ಕಾಂತಿಯುತವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ